ಉದಯವಾಹಿನಿ, ಉಡುಪಿ: ಆರ್‌ಎಸ್‌ಎಸ್ (RSS) ಎಂದರೆ ಸೇವೆ, ದೇಶಭಕ್ತಿ-ಶಿಸ್ತು. ಸಂಘ ಇಂದಿರಾ ಗಾಂಧಿಗೆ ಹೆದರಿಲ್ಲ, ನೆಹರು ಮುಂದೆ ಮಂಡಿಯೂರಿಲ್ಲ. ಇವರಪ್ಪ ಗೃಹ ಸಚಿವರಾದಾಗ ಏನು ಮಾಡಲು ಸಾಧ್ಯವಾಗಿಲ್ಲ. ಪ್ರಿಯಾಂಕ್ ಖರ್ಗೆ ಕೈಯಲ್ಲಿ ಏನು ಮಾಡಲು ಸಾಧ್ಯ ಎಂದು ಶಾಸಕ, ಮಾಜಿ ಸಚಿವ ಸುನಿಲ್ ಕುಮಾರ್ ತಿರುಗೇಟು ಕೊಟ್ಟಿದ್ದಾರೆ.
ಆರ್‌ಎಸ್‌ಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದಿರುವ ಬಗ್ಗೆ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡೂವರೆ ವರ್ಷದಿಂದ ಗ್ರಾಮೀಣಾಭಿವೃದ್ಧಿ ಇಲಾಖೆ ಕೋಮಾ ಸ್ಥಿತಿಯಲ್ಲಿದೆ. ಪ್ರಿಯಾಂಕ್ ಖರ್ಗೆ ತಮ್ಮ ಖಾತೆ ನಿಭಾಯಿಸಲಾಗದ ವಿಫಲ ಸಚಿವ. ನಾನೊಬ್ಬ ಸಚಿವ ಎಂದು ತೋರ್ಪಡಿಸಲು ಪದೇ ಪದೇ ಮಾಧ್ಯಮದ ಮುಂದೆ ಬರುತ್ತಾರೆ. ಇಂತಹ ವಿಚಾರಗಳನ್ನು ಪ್ರಸ್ತಾಪಿಸುವುದು ಪ್ರಿಯಾಂಕ್ ಖರ್ಗೆಗೆ ಚಟ ಎಂದರು. 80% ಭ್ರಷ್ಟಾಚಾರ ಮರೆಮಾಚಲು ವಿವಾದ ಸೃಷ್ಟಿಸುತ್ತಾರೆ. ರಾಜ್ಯದಲ್ಲಿ ಗ್ರಾಮೀಣ ರಸ್ತೆಗಳು ಗುಂಡಿ ಬೀಳಲು ಪ್ರಿಯಾಂಕ್ ಖರ್ಗೆ ಕಾರಣ. ಇವರ ಆಡಳಿತದಲ್ಲಿ ಒಂದು ಕಿಲೋಮೀಟರ್ ಹೊಸ ರಸ್ತೆ ನಿರ್ಮಾಣವಾಗಿಲ್ಲ. ಗ್ರಾಮ ಪಂಚಾಯಿತಿಗೆ ಅನುದಾನ ಇಲ್ಲ, ಹೊಸ ಪಿಡಿಒ ನೇಮಕಾತಿಯಿಲ್ಲ. ನಾಲಾಯಕ್ ಸಚಿವ ಆರ್‌ಎಸ್‌ಎಸ್ ಅನ್ನು ಟೀಕಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಆರ್‌ಎಸ್‌ಎಸ್ ಹೆಸರು ತೆಗೆದರೆ ಪ್ರಚಾರಗಿಟ್ಟಿಸಬಹುದು ಎಂಬುದು ಉದ್ದೇಶ. ಪ್ರಿಯಾಂಕ್ ಖರ್ಗೆ ಶಾಶ್ವತ ಅಲ್ಲ, ಅವರ ಅಧಿಕಾರವೂ ಶಾಶ್ವತ ಅಲ್ಲ. ಆರ್‌ಎಸ್‌ಎಸ್ ಶಾಶ್ವತ, ಆರ್‌ಎಸ್‌ಎಸ್‌ನ ವಿಚಾರ ಶಾಶ್ವತ. ಕೈಲಾಗದವ ಏನೋ ಮಾಡಿದ್ದಾನೆ ಎಂಬ ಪರಿಸ್ಥಿತಿ ಖರ್ಗೆಯದ್ದು. ಸರ್ಕಾರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದು ಹರಿಹಾಯ್ದರು.

Leave a Reply

Your email address will not be published. Required fields are marked *

error: Content is protected !!