ಉದಯವಾಹಿನಿ, ಇಸ್ರೇಲ್ ಮತ್ತು ಹಮಾಸ್ ನಡುವಿನ ದೀರ್ಘಕಾಲಿಕ ಯುದ್ಧಕ್ಕೆ ಇದೀಗ ಅಂತ್ಯವಾಡುವ ಕಾಲ ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಜಾರಿಗೆ ಬಂದ ಕದನ ವಿರಾಮ ಒಪ್ಪಂದದ ಮೊದಲ ಹಂತದಲ್ಲಿ, ಹಮಾಸ್ ಸೆರೆಯಲ್ಲಿದ್ದ 7 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಇದು 20 ಒತ್ತೆಯಾಳುಗಳ ಬಿಡುಗಡೆಯಲ್ಲಿ ಮೊದಲ ಹೆಜ್ಜೆಯಾಗಿದ್ದು ಇದೀಗ 7 ಜನರನ್ನು ಸೆರೆವಾಸದಿಂದ ಬಿಡುಗಡೆ ಮಾಡಲಾಗಿದೆ.
ಬರೋಬ್ಬರಿ 2 ವರ್ಷ 5 ದಿನಗಳ ಬಳಿಕ ಹಮಾಸ್ ಸೆರೆಯಲ್ಲಿದ್ದ 7 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ರೆಡ್‌ಕ್ರಾಸ್ ಮೂಲಕ ಇಸ್ರೇಲ್‌ಗೆ ಹಸ್ತಾಂತರ ಮಾಡಲಾಗುತ್ತದೆ. ಇದೀಗ ಈ ವಿಷಯ ತಿಳಿದು ಕುಟುಂಬಸ್ಥರು ಸಂತೋಷಗೊಂಡಿದ್ದಾರೆ.

ಈ ಘಟನೆಯು ಅಕ್ಟೋಬರ್ 7, 2023ರಂದು ಹಮಾಸ್ ನಡೆಸಿದ ದಾಳಿಯಿಂದ ಆರಂಭವಾದ ಯುದ್ಧಕ್ಕೆ ಸಂಭವಿಸಿದ ಬದಲಾವಣೆಯಾಗಿದ್ದು, ಬರೋಬ್ಬರಿ 2 ವರ್ಷ 5 ದಿನಗಳ ನಂತರ ಇದು ಸಾಧ್ಯವಾಗಿದೆ. ಟ್ರಂಪ್ ಇಸ್ರೇಲ್ ಮತ್ತು ಈಜಿಪ್ಟ್‌ಗೆ ತೆರಳಿ, ಶಾಂತಿ ಸ್ಥಾಪನೆಗೆ ತೊಡಗಿದ್ದಾರೆ. ಸೋಮವಾರ ಈಜಿಪ್ಟ್‌ನ ಶರ್ಮ್ ಎಲ್-ಶೇಖ್‌ನಲ್ಲಿ 20ಕ್ಕೂ ಹೆಚ್ಚು ವಿಶ್ವ ನಾಯಕರ ಶಾಂತಿ ಶೃಂಗಸಭೆಯ ಅಧ್ಯಕ್ಷತೆಯನ್ನು ಟ್ರಂಪ್ ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ವಹಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!