ಉದಯವಾಹಿನಿ,ಚಳ್ಳಕೆರೆ: ಶೇಂಗಾ ನಾಡು ಚಳ್ಳಕೆರೆಯಲ್ಲಿ ಸದ್ಯ ಮಳೆ ಇಲ್ಲದೇ ರೈತರು ಕಂಗಾಲಾಗಿರುವುದು ಒಂದು ಕಡೆಯಾದರೆ, ನೀರೇ ನೋಡದ ತೋಟಗಳ ರೈತ ಮಹಿಳೆಯೊಬ್ಬರು ಈಗ ಹೊಸ ಮಾರ್ಗ ಅನುಸರಿಸುತ್ತಿದ್ದು, ಗುಲಾಬಿ ಹೂ ಬೆಳೆದು ತಿಂಗಳಿಗೆ ಮೂವತ್ತರಿಂದ ನಲವತ್ತು ಸಾವಿರ ಲಾಭ ಗಳಿಸುತ್ತಿದ್ದಾರೆ. ಇದು ಆಯಿಲ್‌ಸಿಟಿ ರೈತ ಮಹಿಳೆಯ ಯಶೋಗಾಥೆ. ಭೂಮಿಯಲ್ಲಿ ನೀರಿನ ಕೊರತೆಯಿದ್ದರೂ ಪ್ರತಿ ತಿಂಗಳೂ ಕೈ ತುಂಬಾ ಹಣ ನೋಡುತ್ತಿರುವ ಈ ರೈತ ಮಹಿಳೆಯ ಹೆಸರು ಶ್ರೀದೇವಿ. ಯಾಲಗಟ್ಟೆ ಗೊಲ್ಲರಹಟ್ಟಿ ಗ್ರಾಮದ ಮಹಿಳೆ. ಸದ್ಯ ಈ ರೈತ ಮಹಿಳೆ ವರ್ಷ ಪೂರ್ತಿ ಸಿಗುವ ಗುಲಾಬಿ ಬೆಳೆದು ಬೇರೊಬ್ಬರಿಗೆ ಕೈ ಒಡ್ಡದೇ ಆರ್ಥಿಕ ಸ್ಥಿತಿಯಲ್ಲಿ ಸೈ ಎನಿಸಿಕೊಂಡಿದ್ದಾರೆ.
