ಉದಯವಾಹಿನಿ, ಕನ್ನಡದ ಕಿರುತೆರೆ ಲೋಕದಲ್ಲಿ ಆ್ಯಂಕರ್ ಅನುಶ್ರೀ ಎಂದರೆ ಬಹುತೇಕರಿಗೆ ಅಚ್ಚು ಮೆಚ್ಚು. ಜೀ ಕನ್ನಡ ವಾಹಿನಿಯ ಬಹುತೇಕ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದ ಇವರು ತಮ್ಮ ಸ್ವಂತ ಯೂಟ್ಯೂಬ್ ಚಾನೆಲ್ ಮೂಲಕವು ಸೆಲೆಬ್ರಿಟಿಗಳ ಇಂಟರ್ ವ್ಯೂವ್ ಮಾಡಿಕೊಂಡು ಪ್ರೇಕ್ಷಕರನ್ನು ರಂಜಿಸುತ್ತಲೇ ಇರುತ್ತಾರೆ. ಇವರು ನಟ ರಕ್ಷಿತ್ ಶೆಟ್ಟಿ ಯನ್ನು ವಿವಾಹವಾಗುತ್ತಾರೆ ಎಂದು ಮೊದಲು ಹೇಳಲಾಗಿತ್ತು. ಬಳಿಕ ಹಾಸ್ಯ ನಟ ಚಿಕ್ಕಣ್ಣ ಅವರೊಂದಿಗೆ ಲವ್ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚೆಗಷ್ಟೇ ಕೊಡಗು ಮೂಲದ ಐಟಿ ಉದ್ಯೋಗಿಯಾಗಿರುವ ರೋಷನ್ ರಾಮಮೂರ್ತಿ ಅವರನ್ನು ಪ್ರೀತಿಸಿ ವಿವಾಹವಾಗುವ ಮೂಲಕ ಉಂಟಾದ ಎಲ್ಲ ವದಂತಿಗಳಿಗೂ ತೆರೆ ಎಳೆದರು. ಇದೀಗ ತಮ್ಮ ಪತಿ ರೋಷನ್ ಅವರ ಹುಟ್ಟುಹಬ್ಬಕ್ಕೆ ಅವರ ಪತ್ನಿ, ಆ್ಯಂಕರ್ ಅನುಶ್ರೀ ಅವರು ಇನ್‌ಸ್ಟಾಗ್ರಾಂನಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಫೋಟೋಗಳೊಂದಿಗೆ ವಿಶೇಷ ಕವನವೊಂದನ್ನು ಬರೆದು ವಿಶೇಷವಾಗಿ ಶುಭಕೋರಿದ್ದಾರೆ.ಅ.14ರಂದು ರೋಷನ್ ಅವರ ಜನ್ಮದಿನವಾಗಿದ್ದು ಈ ಬಾರಿ ನಟಿ, ಆ್ಯಂಕರ್ ಅನುಶ್ರೀ ಅವರು ಪತಿಗೆ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ಪತಿಯ ಜೊತೆಗಿನ ವಿಶೇಷ ಕ್ಷಣಗಳ ಫೋಟೋ ಗಳನ್ನು ಅವರು ಹಂಚಿಕೊಂಡಿದ್ದಾರೆ. ಮದುವೆ ಸಂದರ್ಭದಲ್ಲಿ ತೆಗೆದ ಫೋಟೊ, ಬಳಿಕ ಟ್ರಿಪ್ ಹೋಗಿದ್ದ ಫೋಟೊ ಜೊತೆಗೆ ನಿನ್ನ ಜೊತೆಗೆ ನಾನು ಮಾತ್ರವೇ ಇರಬೇಕು ಎಂಬ ಅರ್ಥದಲ್ಲಿ ವಿಶೇಷ ಪೋಸ್ಟ್ ನಲ್ಲಿ ಬರೆದಿದ್ದಾರೆ.
