ಉದಯವಾಹಿನಿ, ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಅಪ್ರತಿಮ ಪ್ರತಿಭೆಯಿಂದಲೆ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದ ನಟರಾಗಿದ್ದಾರೆ. ಅಭಿ, ವೀರ ಕನ್ನಡಿಗ, ನಮ್ಮ ಬಸವ, ಪವರ್, ಜಾಕಿ, ರಾಮ್ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾದಲ್ಲಿ ನಟಿಸಿದ್ದ ಪುನೀತ್ ಹಾಡು , ಡ್ಯಾನ್ಸ್ , ಫೈಟ್ ಎಲ್ಲದಕ್ಕೂ ಸೈ ಎನಿಸಿಕೊಂಡವರು. ಇಂದು ಅವರು ನಮ್ಮೊಂದಿಗೆ ಇಲ್ಲ ವಾದರು ಅವರು ನಟಿಸಿದ್ದ ಸಿನಿಮಾ ಹಾಗೂ ಸಮಾಜ ಸೇವೆಯ ಮೂಲಕ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಈ ನಡುವೆ ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿವೊಂದು ಸಿಕ್ಕಿದ್ದು ಶೀಘ್ರದಲ್ಲೇ “ಅಪ್ಪು” ಆ್ಯಪ್ ಲಾಂಚ್ ಮಾಡುವ ಬಗ್ಗೆ ಅಶ್ವಿನಿ ಪುನೀತ್ ಅವರು ಗುಡ್ ನ್ಯೂಸ್ ನೀಡಿದ್ದಾರೆ.
ಅ.29ಕ್ಕೆ ಪುನೀತ್ ರಾಜ್ ಕುಮಾರ್ ನಿಧನರಾಗಿ ನಾಲ್ಕು ವರ್ಷ ಕಳೆಯಲಿದೆ. ಹೀಗಾಗಿ ಇದೀಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಅಪ್ಪು ಸ್ಮರಣೆಯಲ್ಲಿ ಜನಸ್ನೇಹಿ ಅಪ್ಲಿಕೇಶನ್ ಒಂದನ್ನು ಲೋಕಾರ್ಪಣೆ ಮಾಡಲು ಸಿದ್ದರಾಗಿದ್ದಾರೆ. ಆ್ಯಪ್ ಲಾಂಚ್ ಗೆ ಈಗಾಗಲೇ ತಯಾರಿ ಮಾಡಿಕೊಳ್ಳಲಾಗಿದ್ದು ಅಪ್ಲಿಕೇಶನ್ ಲಾಂಚ್ ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಹ್ವಾನ ನೀಡಿದ್ದಾರೆ. ಫೋಟೋ ಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.ಪುನೀತ್ ರಾಜ್‌ಕುಮಾರ್ ಅವರ ಈ ಅಪ್ಲಿಕೇಶನ್ಗೆ ‘ಪಿಆರ್ಕೆ’ ಎಂದು ಹೆಸರು ಇಡಲಾಗಿದ್ದು ಅಕ್ಟೋಬರ್ 25 ಕ್ಕೆ ಅಪ್ಪು ಆ್ಯಪ್ ಕುರಿತು ಸುದ್ದಿಗೋಷ್ಠಿ ಇರಲಿದೆ. ಈ ಆ್ಯಪ್ ನಲ್ಲಿ ಪುನೀತ್ ರಾಜಕುಮಾರ್ ಅವರ ಕಲಾ ಪ್ರತಿಭೆ, ಸಮಾಜಸೇವೆ, ಮಾನವೀಯ ಕೆಲಸವನ್ನು ಜನರಿಗೆ ಪಸರಿಸುವಂತೆ ಮಾಡಲು ಹಾಗೂ ಸ್ಫೂರ್ತಿ ತುಂಬಲು ಈ ಅಪ್ಲಿಕೇಶನ್ ಅನ್ನು ಜಾರಿ ಮಾಡ ಲಾಗುತ್ತಿದೆ. ಆಕ್ಟೋಬರ್ 25 ಕ್ಕೆ ಅಪ್ಪು ಆ್ಯಪ್ ಅನ್ನು ಡಿಸಿಎಂ ಡಿಕೆಶಿವಕುಮಾರ್ ಲಾಂಚ್ ಮಾಡಲಿದ್ದಾರೆ.
ಪುನೀತ್ ತೆರೆಯ ಮೇಲಿನ ಒಳ್ಳೆಯ ನಟರಷ್ಟೇ ಆಗಿರಲಿಲ್ಲ. ಬದಲಾಗಿ ತೆರೆಯ ಹಿಂದಿನ ಹೃದಯ ವಂತ ಕೂಡ ಆಗಿದ್ದರು. ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಇಂದಿಗೆ ಹಲವು ವರ್ಷ ಕಳೆದರೂ ಅಂದಿನಿಂದಲೂ ಇಂದಿನವರೆಗೂ ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಅಪ್ಪು ವನ್ನು ನೆನಪಿಸಿಕೊಳ್ಳುತ್ತಲೇ ಇದ್ದು ಅವರ ಪರವಾಗಿ ಮಾನವೀಯ ಕೆಲಸವನ್ನು ಮಾಡುತ್ತಿದ್ದಾರೆ. ಈ ನಡುವೆ ಅಶ್ವಿನಿ ಪುನೀತ್ ಅವರು ಈ ಆ್ಯಪ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ.
