ಉದಯವಾಹಿನಿ, ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಎರಡು ವಾರ ಕಳೆದಿದೆ. ಈ ಸೀಸನ್ ಜಂಟಿ ಹಾಗೂ ಒಂಟಿ ಎಂಬ ಕಾನ್ಸೆಪ್ಟ್ ಮೂಲಕ ಶುರುವಾಯಿತು. ಗ್ರ್ಯಾಂಡ್ ಓಪನಿಂಗ್ ದಿನ ಕಿಚ್ಚ ಸುದೀಪ್ ಅವರು ಓಟಿಂಗ್ ಆಧಾರದ ಮೇಲೆ ಕೆಲ ಸ್ಪರ್ಧಿಗಳನ್ನು ಒಂಟಿಯಾಗಿ ಹಾಗೂ ಇನ್ನೂ ಕೆಲ ಸ್ಪರ್ಧಿಗಳನ್ನು ಜಂಟಿಯಾಗಿ ಮನೆಯೊಳಗೆ ಕಳುಹಿಸಿದರು. ಒಂಟಿ ಸದಸ್ಯರು ಮನೆಯೊಳಗೆ ಒಬ್ಬೊಬ್ಬರೆ ಆರಾಮವಾಗಿ ಇದ್ದರೆ, ಜಂಟಿ ಸದಸ್ಯರು ತಮ್ಮ ಪಾರ್ಟ್ನರ್ ಜೊತೆ ಹಗ್ಗ ಕಟ್ಟಿಕೊಂಡು ಜೊತೆಯಲ್ಲೇ ಇರಬೇಕಿತ್ತು. ಮೊದಲ ಎರಡು ವಾರ ಹೀಗೆ ನಡೆದಿದೆ. ಆದರೆ, ಮೂರನೇ ವಾರ ಇದಕ್ಕೆ ಬ್ರೇಕ್ ಬಿದ್ದಿದ್ದು, ವೈಯಕ್ತಿಕ ಆಟ ಆಡಿಸಲಾಗುತ್ತಿದೆ. ಇದರಲ್ಲಿ ಕೆಲ ಸ್ಪರ್ಧಿಗಳ ನೈಜ್ಯ ಬಣ್ಣ ಬಯಲಾಗಿರುವಂತೆ ಕಾಣುತ್ತಿದೆ.

ಹೌದು, ಈ ವಾರ ಬಿಗ್ ಬಾಸ್​ನಲ್ಲಿ ಎಲ್ಲ ಸ್ಪರ್ಧಿಗಳ ಮಹತ್ವದ್ದಾಗಿದೆ. ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದಾರೆ. ಯಾಕಂದ್ರೆ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ಮೊದಲ ಫಿನಾಲೆ ನಡೆಯಲಿದೆ. ಹೀಗಾಗಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಸ್ಪರ್ಧಿಗಳು ಮೈಚಳಿ ಬಿಟ್ಟು ಆಡುತ್ತಿದ್ದಾರೆ. ಈಗಾಗಲೇ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಸ್ಪಂದನಾ ಸೋಮಣ್ಣ ಹಾಗೂ ಮಾಲು ಫಿನಾಲೆ ಕಂಟೆಂಡರ್ ಆಗಿದ್ದಾರೆ. ಇನ್ನೋರ್ವ ಸ್ಪರ್ಧಿ ಯಾರು ಎಂಬುದು ನೋಡಬೇಕಿದೆ. ಸದ್ಯ ಈ ವಾರ ಫೈನಲಿಸ್ಟ್ ಬಿಟ್ಟು ಉಳಿದ ಎಲ್ಲ ಸ್ಪರ್ಧಿಗಳು ನಾಮಿನೇಟ್ ಆಗಿರುವ ಕಾರಣ ವಾರಾಂತ್ಯದಲ್ಲಿ ಮಾಸ್ ಎಲಿಮಿನೇಷನ್ ನಡೆಯಲಿದೆ. ಹೀಗಾಗಿ ಈ ವಾರ ನೀಡಲಿರುವ ಟಾಸ್ಕ್ ಸ್ಪರ್ಧಿಗಳು ಮುಖ್ಯವಾಗಿದೆ.

ಮೊದಲ ಫಿನಾಲೆಯ ಈ ವಾರ ತಾವು ಫೈನಲಿಸ್ಟ್ ಆಗಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರಯಾಣ ಮುಂದುವರೆಸಲು ಇದು ಕಟ್ಟ ಕಡೆಯ ಅವಕಾಶ ಎಂದು ಹೇಳಿ ಬಿಗ್ ಬಾಸ್ ಟಾಸ್ಕ್ ನೀಡಿದ್ದಾರೆ. ಇದರಲ್ಲಿ ಗೆದ್ದವರಿಗೆ ಉಳಿಗಾಲ.. ಸೋತವರು ಯಾವ ಸಂದರ್ಭದಲ್ಲಿ ಬೇಕಾದ್ರೂ ಎಲಿಮಿನೇಟ್ ಆಗಬಹುದು. ಇದೀಗ ಕಲರ್ಸ್ ಇಂದಿನ ಎಪಿಸೋಡ್​ನ ಒಂದು ಪ್ರೋಮೋ ಹೊರಬಿಟ್ಟಿದೆ.ಆಟದಲ್ಲಿ ಉಳಿಸಲು ಇಚ್ಚಿಸುವ ಒಬ್ಬ ಸದಸ್ಯನ ಭಾವಚಿತ್ರದ ಮುಂದೆ ದೊಡ್ಡ ಚೆಂಡನ್ನು ಇಡಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ. ಈ ಸಂದರ್ಭ ಕೆಲ ಮಹಿಳಾ ಸ್ಪರ್ಧಿಗಳು ಗುಂಪಾಗಿ ಚರ್ಚಿಸಿ ತಮ್ಮ ತಮ್ಮ ಫೋಟೋದ ಮುಂದೆ ಚೆಂಡನ್ನು ಇಡುವ ತೀರ್ಮಾನ ಮಾಡಿದ್ದಾರೆ. ಅಂತಿಮವಾಗಿ ಅಶ್ವಿನಿ ಎಸ್​.ಎನ್ ಅವರ ಫೋಟೋ ಟಾಸ್ಕ್ ಮುಗಿದ ಬಳಿಕ ಮನೆಯಲ್ಲಿ ಜಗಳ ನಡೆದಿದೆ. ಸ್ಪಂದನಾ ಹಾಗೂ ರಾಶಿಕಾ ಮಾತನಾಡುತ್ತ ಟೀಮ್ ಆಗೋಣ ಅಂತ ಕರೆದಿದ್ದೇ ಕಾವ್ಯ ಅವರು ಎಂದು ಹೇಳಿದ್ದಾರೆ. ಇದು ಅಶ್ವಿನಿ ಎಸ್​ಎನ್ ಕಿವಿಗೆ ಬಿದ್ದಿದೆ ಎಂಬಂತೆ ಕಾಣುತ್ತಿದೆ. ಸದ್ಯ ಇದೆಲ್ಲ ಕಾವ್ಯ ಪ್ಲ್ಯಾನ್.. ಅವಳು ನೋಡಿದ ರೀತಿ ಅಲ್ಲ ಎಂದು ಕೆಲವು ಅಭಿಪ್ರಾಯ ಹೊರಹಾಕಿದ್ದಾರೆ. ಅತ್ತ ಅಶ್ವಿನಿ ಎಸ್​ಎನ್ ಬೇಸರದಲ್ಲಿ ಮುಳುಗಿದ್ದಾರೆ. ಇದಾದ ಬಳಿಕ ಏನೆಲ್ಲ ಆಗಿದೆ ಎಂಬುದು ಇಂದಿನ ಎಪಿಸೋಡ್​ನಲ್ಲಿ ನೋಡಬೇಕಿದೆ.ಎದುರು ಯಾರೂ ಚೆಂಡು ಇಟ್ಟಿರುವುದಿಲ್ಲ.. ಅವರು ಆಟದಿಂದ ಹೊರಗುಳಿದಿದ್ದಾರೆ.

Leave a Reply

Your email address will not be published. Required fields are marked *

error: Content is protected !!