ಉದಯವಾಹಿನಿ, ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶ ಪ್ರಪಂಚವು ವೇಗವಾಗಿ ಬದಲಾಗುತ್ತಿದೆ. ಸ್ಪೇಸ್‌ಎಕ್ಸ್‌ನಂತಹ ಕಂಪನಿಗಳು ಸಾವಿರಾರು ಉಪಗ್ರಹಗಳನ್ನು ಉಡಾವಣೆ ಮಾಡುತ್ತಿವೆ, ಇಂಟರ್ನೆಟ್ ಮತ್ತು ಸಂವಹನದಂತಹ ಸೇವೆಗಳನ್ನು ನಮಗೆ ಒದಗಿಸುತ್ತಿವೆ. ಆದರೆ ಈ ತ್ವರಿತ ವೇಗವು ಹೊಸ ಕಳವಳಕ್ಕೂ ಕಾರಣವಾಗುತ್ತಿದೆ: ಈ ಉಪಗ್ರಹಗಳು ಅವುಗಳ ಉದ್ದೇಶಿತ ಕಾರ್ಯದ ಬಳಿಕ ಭೂಮಿಗೆ ಹಿಂತಿರುಗುತ್ತಿವೆ.
ಪ್ರತಿದಿನ, ಒಂದು ಅಥವಾ ಎರಡು ಉಪಗ್ರಹಗಳು ಭೂಮಿಯ ವಾತಾವರಣದಲ್ಲಿ ಸುಟ್ಟುಹೋಗುತ್ತಿವೆ ಮತ್ತು ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆ ಐದು ತಲುಪಬಹುದು. ಹೀಗಿರುವಾಗ ಇದರಿಂದ ಬಾಹ್ಯಾಕಾಶದಲ್ಲಿ ಅದೆಷ್ಟು ಕಸ ತುಂಬಲಿದೆ ಎಂದರೆ ಇದರಿಂದ ಒಂದು ‘ಚೇನ್ ರಿಯಾಕ್ಷನ್’ ಶುರುವಾಗಿ, ನೋಡ ನೋಡುತ್ತಿದ್ದಂತೆಯೇ ಭೂಮಿಯ ಕಕ್ಷೆಯನ್ನು ಅಪಾಯಕಾರಿಯಾಗಿಸಬಹುದೆಂಬ ಭೀತಿ ವಿಜ್ಞಾನಿಗಳನ್ನು ಕಾಡಲಾರಂಭಿಸಿದೆ.
ಭೂಮಿಗೆ ಬೀಳುವ ಉಪಗ್ರಹಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ
ಸ್ಮಿತ್ಸೋನಿಯನ್ ಖಗೋಳ ಭೌತಶಾಸ್ತ್ರಜ್ಞ ಜೊನಾಥನ್ ಮೆಕ್‌ಡೊವೆಲ್ ಟ್ರ್ಯಾಕ್ ಮಾಡಿದ ಮಾಹಿತಿಯ ಪ್ರಕಾರ, ಪ್ರಸ್ತುತ ಒಂದರಿಂದ ಎರಡು ಸ್ಟಾರ್‌ಲಿಂಕ್ ಉಪಗ್ರಹಗಳು ಪ್ರತಿದಿನ ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸುತ್ತಿವೆ. ಈ ಉಪಗ್ರಹಗಳು ಸುಟ್ಟು ನಾಶವಾಗಲಿವೆ ಎಂದು ಭಾವಿಸಲಾಗಿದೆ, ಆದರೆ ಈ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. “ನಮ್ಮಲ್ಲಿ ಈಗಾಗಲೇ 8,000 ಕ್ಕೂ ಹೆಚ್ಚು ಸ್ಟಾರ್‌ಲಿಂಕ್ ಉಪಗ್ರಹಗಳು ತಲೆಯ ಮೇಲೆ ಇವೆ.

Leave a Reply

Your email address will not be published. Required fields are marked *

error: Content is protected !!