ಉದಯವಾಹಿನಿ, ಬೆಂಗಳೂರು: ಬಜೆಟ್ ಮಂಡನೆಯ ಹಿನ್ನೆಯಲ್ಲಿ ಕುಮಾರಸ್ವಾಮಿಯವರು ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಮಂಡಿಸಿದ ಎಲ್ಲ ಬಜೆಟ್ ಅಧ್ಯಯನ ಮಾಡಿದ್ದೇನೆ. ದುಡಿಯುವ ಕೈಗಳಿಗೆ ಸ್ವಾವಲಂಬಿಯಾಗಿಸಲು ಯೋಜನೆ ಏನು ನಿಮ್ಮ ಯಾವ ಗ್ಯಾರಂಟಿಗೂ ನನ್ನ ತಕಾರರು ಇಲ್ಲ. ಇನ್ನು ಎರಡು ಗ್ಯಾರಂಟಿಗಳನ್ನು ಕೊಡಿ ನಮ್ಮದೇನು ತಕರಾರಿಲ್ಲ. ಗ್ಯಾರಂಟಿ ಗಳಿಗೆ ವರ್ಷಕ್ಕೆ 50 ರಿಂದ 60 ಸಾವಿರ ಕೋಟಿ ವೆಚ್ಚ ಆಗಲಿದೆ. ಬೇರೆ ಯಾವುದಕ್ಕೂ ಬಜೆಟ್ ನಲ್ಲಿ ಸರ್ಕಾರ ಹಣ ಮೀಸಲಿಟ್ಟಿಲ್ಲ. ಇದು ಕೇಂದ್ರ ಮತ್ತು ಹಿಂದಿನ ಸರ್ಕಾರವನ್ನು ದೂಷಿಸುವ ಬಜೆಟ್ ಅಷ್ಟೇ ಬೆಂಗಳೂರಿನಲ್ಲಿ ಬಜೆಟ್ ಮಂಡನೆಯ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
