ಉದಯವಾಹಿನಿ, ಮುಂಬೈ: ಬಾಲಿವುಡ್ ನಟಿ, 25 ವರ್ಷದ ಝೈರಾ ವಾಸಿಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್‌ನ ‘ದಂಗಲ್ ಮತ್ತು ‘ಸೀಕ್ರೆಟ್ ಸೂಪರ್‌ಸ್ಟಾರ್’ ಖ್ಯಾತಿಯ ಝೈರಾ ದಿಢೀರ್ ಆಗಿ ವಿವಾಹವಾಗಿದ್ದು ಮದುವೆ ಸಮಾರಂಭದ ಕೆಲವು ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಫೋಟೊ ಜೊತೆಗೆ ವಿಶೇಷ ಪೋಸ್ಟ್ ಶೇರ್ ಮಾಡಿದ್ದಾರೆ. ಒಂದು ಫೋಟೊದಲ್ಲಿ ಅವರು ಮದುವೆ ರಿಜಿಸ್ಟ್ರೇಶನ್‌ಗೆ ಸಹಿ ಹಾಕುತ್ತಿರುವ ದೃಶ್ಯ ಕಾಣಬಹುದು. ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
2019ರಲ್ಲಿ ಬಾಲಿವುಡ್‌ನಲ್ಲಿ ಜನಪ್ರಿಯರಾದ ಝೈರಾ ಧಾರ್ಮಿಕ ಕಾರಣಗಳನ್ನು ಉಲ್ಲೇಖಿಸಿ ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದಾರೆ. ಇದೀಗ ಸರ್‌ಪ್ರೈಸ್ ಎಂಬಂತೆ ಮದುವೆ ಸಮಾರಂಭದ ಎರಡು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.
ಈ ಫೋಟೊ ಜತೆಗೆ ‘ಕಬೂಲ್ ಹೈ’ ಎಂಬ ಶೀರ್ಷಿಕೆಯನ್ನು ಕೂಡ ಅವರು ನೀಡಿದ್ದಾರೆ. ವೈರಲ್ ಆದ ಫೋಟೊದಲ್ಲಿ ಮೆಹೆಂದಿ ಮತ್ತು ಪಚ್ಚೆ ಉಂಗುರ ಧರಿಸಿದ್ದ ನಟಿ ಝೈರಾ ತನ್ನ ಮದುವೆಯ ಅಗ್ರಿಮೆಂಟ್‌ಗೆ ಸಹಿ ಹಾಕಿದ್ದನ್ನು ಕಾಣಬಹುದು. ಇನ್ನೊಂದು ಫೋಟೊದಲ್ಲಿ ಅವರು ಪತಿಯೊಂದಿಗೆ ಚಂದ್ರನನ್ನು ನೋಡುತ್ತಿರುವ ದೃಶ್ಯವಿದೆ. ಝೈರಾ ಹಂಚಿಕೊಂಡ ಫೋಟೊದಲ್ಲಿ ಅವರ ಮುಖ ಚಹರೆಯೇನು ಕಾಣಿಸುತ್ತಿಲ್ಲ. ಅಷ್ಟು ಮಾತ್ರವಲ್ಲದೆ ತಾನು ಯಾರನ್ನು ವಿವಾಹವಾಗಿದ್ದೇನೆಂಬ ಸಿಕ್ರೇಟ್ ಅನ್ನು ಕೂಡ ಅವರು ಬಿಟ್ಟುಕೊಟ್ಟಿಲ್ಲ.
