ಉದಯವಾಹಿನಿ , ಅರ್ಹರಿಗೆ ಪ್ರಶಸ್ತಿ ಕೊಡ್ಬೇಕು ಅಂತ ಮಾಡಿದ್ದೇ ಪ್ರಧಾನಿ ಮೋದಿ ಅಂತ ಜಗ್ಗೇಶ್ ಹೇಳಿದ್ರು ಎಂದು ಪದ್ಮಭೂಷಣ ಪ್ರಶಸ್ತಿ ಬಗ್ಗೆ ಹಿರಿಯ ನಟ ಅನಂತ್ ನಾಗ್ ಮಾತನಾಡಿದರು. ಪದ್ಮ ಪ್ರಶಸ್ತಿ ಪಡೆದ ನಟರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅನಂತ್ ನಾಗ್, ಇದು ನನ್ನ ಪ್ರಶಸ್ತಿ ಅಲ್ಲ. ಕನ್ನಡ ಚಿತ್ರರಂಗಕ್ಕೆ ಈ ಪ್ರಶಸ್ತಿ ಅರ್ಪಿಸಿದ್ದೇನೆ. ಅರ್ಹರಿಗೆ ಈ ಪ್ರಶಸ್ತಿ ಕೊಡ್ಬೇಕು ಅಂತ ಮಾಡಿದ್ದೆ ನರೇಂದ್ರ ಮೋದಿ ಅವ್ರು ಅಂತ ಜಗ್ಗೇಶ್ ಅವ್ರು ಹೇಳಿದ್ರು ಎಂದು ನೆನಪಿಸಿಕೊಂಡರು.
ನಾನು ಮೊದಲ ಸಲ ಅಸೆಂಬ್ಲಿಗೆ ಹೋಗಿದ್ದೆ, ಅಲ್ಲಿ ಮಂತ್ರಿ ಆಗಿದ್ದೆ. ಆಗ ಡಿಕೆಶಿನ ನೋಡಿ ಎಷ್ಟು ಸ್ಮಾರ್ಟ್ ಇದ್ದಾರೆ, ಇವ್ರು ರಾಜಕೀಯದಲ್ಲಿ ಏನು ಮಾಡ್ತಿದ್ದಾರೆ ಅನ್ಕೊಂಡೆ. ಅವತ್ತಿಂದ ಹೇಳ್ಬೇಕು ಅನ್ಕೋತಿದ್ದೆ. ಡಿಕೆಶಿ ಇಂಡಸ್ಟ್ರಿಗೆ ಬರ್ಬೇಕಿತ್ತು ಎಂದು ಹೇಳಿದರು.

53 ವರ್ಷ ಸಿನಿ ಜರ್ನಿ ಮೆಲುಕು ಹಾಕಿದ ಅವರು, ನಿರ್ದೇಶಕ, ನಿರ್ಮಾಪಕರು, ಸಾಹಿತ್ಯ, ಸಂಭಾಷಣೆ ಬರೆಯುವವರಿಗೆ ಧನ್ಯವಾದ. ತಡವಾಗಿ ಶೂಟಿಂಗ್ ಮುಗಿಸಿ ಮನೆಗೆ ಹೋಗಿದ್ದೆ. ಕಾರ್ಯಕ್ರಮ ನೋಡ್ತಿದ್ದೆ. ಆಗ ಅನ್ಸಿದ್ದು ಒಂದೇ ಒಂದು ಹಾಡಿನಲ್ಲೂ ಡಾನ್ಸ್ ಮಾಡಿಲ್ಲ ನಾನು. ಎಕ್ಸ್ಪ್ರೆಷನ್ ಕೊಡ್ತಿದ್ದೆ ಅಷ್ಟೇ. ಡಾನ್ಸ್, ಫೈಟ್ ಏನು ಮಾಡಿಲ್ಲ. ಕನ್ನಡಿಗರು ನನ್ನನ್ನು ಕ್ಷಮಿಸಿದ್ದಾರೆ. 300 ಸಿನಿಮಾ ಮಾಡಿದೀನಿ ಒಪ್ಪಿಕೊಂಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಇದು ಪವಿತ್ರವಾದ ಸಂಭ್ರಮ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿAದ ಪವಿತ್ರ ಕೆಲಸ ಇದು. ನಾನು ವಾಣಿಜ್ಯ ಮಂಡಳಿಯಲ್ಲಿ ಸದಸ್ಯನಾಗಿದ್ದವನು. 35 ವರ್ಷಗಳ ಹಿಂದೆ ಡೈರೆಕ್ಟರ್ ಆಗಿದ್ದವನು. ಎಲೆಕ್ಷನ್‌ಗೂ ಮೊದಲು ಡೈರೆಕ್ಟರ್ ಆಗಿದ್ದೆ. ಅನಂತ್ ನಾಗ್‌ಗೆ ಸನ್ಮಾನ ಅಂದಿದ್ದಕ್ಕೆ ಮಾತ್ರ ಇವತ್ತು ಬಂದಿದ್ದೀನಿ. ಎಲ್ಲಿ ಮನಸ್ಸು ಇದೆಯೋ ಅಲ್ಲಿ ಮಾರ್ಗ ಇದೆ. ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ನೀವೆಲ್ಲ ಬಣ್ಣ ಹಾಕ್ಕೊಂಡು ನಾಟಕ ಮಾಡ್ತಿದ್ದೀರಾ, ನಾವು ಬಣ್ಣ ಹಾಕ್ದೆ ನಾಟಕ ಮಾಡ್ತಿದ್ದೀವಿ. ಮೂರು ನಾಲ್ಕು ವರ್ಷಗಳಿಂದ ಸ್ಯಾಂಡಲ್‌ವುಡ್ ಬಾಲಿವುಡ್‌ನ ಟೇಕ್ ಓವರ್ ಮಾಡಿದೆ ಎಂದು ಬಣ್ಣಿಸಿದರು.

Leave a Reply

Your email address will not be published. Required fields are marked *

error: Content is protected !!