ಉದಯವಾಹಿನಿ , ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಾಪ್ಟರ್ 1 ಬಾಕ್ಸಾಫೀಸ್ ಹಿಟ್ ಕಂಡಿದೆ. ಸಿನಿಮಾ ಯಶಸ್ಸಿನ ಹಿಂದೆ ಅಷ್ಟೇ ಕಡುಪರಿಶ್ರಮ ಇದೆ. ತೆರೆ ಹಿಂದಿನ ಚಿತ್ರೀಕರಣದಲ್ಲಿ ಎದುರಾದ ಅವಘಡಗಳು, ಎದುರಿಸಿದ ಸವಾಲುಗಳ ಬಗ್ಗೆ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಅವರು ಮಾತನಾಡಿದ್ದಾರೆ.
ಮಾತನಾಡಿದ ಪ್ರಗತಿ ಶೆಟ್ಟಿ ಅವರು, ಕಾಂತಾರ ಶೂಟಿಂಗ್ ವೇಳೆ ಎಷ್ಟೋ ಆತಂಕದ ರಾತ್ರಿಗಳನ್ನು ಕಳೆದಿದ್ದೇವೆ. ಒಂದು ದಿನ ಚಿಕ್ಕದಾಗಿ ಆಕ್ಸಿಡೆಂಟ್ ಆಗಿತ್ತು. ಆ ದಿನ ಜ್ವರದ ಕಾರಣಕ್ಕೆ ಶೂಟಿಂಗ್‌ಗೆ ಹೋಗಿರಲಿಲ್ಲ. ಆತಂಕ ಪಡುತ್ತೇನೆ ಅಂತ ನನಗೆ ರಿಷಬ್ ಏನನ್ನೂ ಹೇಳಲ್ಲ. ಕಾಸ್ಟ್ಯೂಮ್ಸ್ ವಿಚಾರಕ್ಕೆ ಅಸಿಸ್ಟೆಂಟ್‌ಗೆ ಕರೆ ಮಾಡಿದಾಗ ವಿಚಾರ ಗೊತ್ತಾಯಿತು. ಗಾಬರಿಯಿಂದ ಸೆಟ್‌ಗೆ ಧಾವಿಸಿದೆ. ಆಗ ರಿಷಬ್ ಏನೂ ಆಗಿಲ್ಲ ನೋಡು ಎಂದು ಹೇಳಿದಾಗ ಸಮಾಧಾನ ಆಯಿತು ಎಂದು ನೆನಪಿಸಿಕೊಂಡರು.
ಸಿನಿಮಾದಲ್ಲಿ ಎಲ್ಲಾ ಫೈಟಿಂಗ್ ಸೀನ್‌ಗಳನ್ನು ತುಂಬಾ ಜಾಗರೂಕತೆಯಿಂದ ನಿರ್ವಹಿಸಿದ್ದಾರೆ. ಮುಂಜಾಗ್ರತೆ ಕ್ರಮವಹಿಸಿ, ಸುರಕ್ಷತೆ ನೋಡಿಕೊಂಡೇ ಎಲ್ಲಾ ಮಾಸ್ಟರ್‌ಗಳು ಆಕ್ಷನ್ ಸೀನ್‌ಗಳನ್ನು ಮಾಡಿದ್ದಾರೆ. ರಿಷಬ್‌ಗೆ ಆಕ್ಷನ್ ಸೀನ್‌ಗಳ ಮೇಲೆಯೇ ಆಸಕ್ತಿ ಜಾಸ್ತಿ. ಅಂದುಕೊಂಡಿದ್ದನ್ನು ಮಾಡಬೇಕು ಅನ್ನೋ ಹಠ. ಎಷ್ಟು ಸುಸ್ತಾದ್ರೂ ಕೇಳಲ್ಲ, ನಾನು ಮಾಡ್ತೀನಿ ಅಂತಾರೆ. ಜೋಶ್ ಜಾಸ್ತಿ. ಅದಕ್ಕೆ ನನಗೆ ಟೆನ್ಷನ್ ಆಗ್ತಿತ್ತು ಎಂದು ಹೇಳಿದರು.
