ಉದಯವಾಹಿನಿ, ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ದೀಪಾವಳಿ ಶುಭಾಶಯ ಕೋರಿ, ಈ ಬೆಳಕಿನ ಹಬ್ಬವು ಜನರ ಜೀವನವನ್ನು ಸಾಮರಸ್ಯ, ಸಂತೋಷ ಮತ್ತು ಸಮೃದ್ಧಿಯಿಂದ ಬೆಳಗಲಿ ಎಂದು ಹಾರೈಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಶುಭಕೋರಿರುವ ಅವರು, ಈ ಬೆಳಕಿನ ಹಬ್ಬವು ನಮ್ಮೆಲ್ಲರ ಜೀವನವನ್ನು ಸಾಮರಸ್ಯ, ಸಂತೋಷ ಮತ್ತು ಸಮೃದ್ಧಿಯಿಂದ ಬೆಳಗಿಸಲಿ. ನಮ್ಮ ಸುತ್ತಲೂ ಸಕಾರಾತ್ಮಕತೆಯ ಮನೋಭಾವ ಮೇಲುಗೈ ಸಾಧಿಸಲಿ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ ದೇಶದ ಜನರಿಗೆ ಹಬ್ಬದ ಸಮಯದಲ್ಲಿ ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವಂತೆ ಕರೆ ನೀಡಿ, ದೇಶಿಯ ಸರಕುಗಳ ಖರೀದಿಯನ್ನು ಪ್ರೋತ್ಸಾಹಿಸಿ, ಸ್ಥಳೀಯ ಕುಶಲಕರ್ಮಿಗಳನ್ನು ಬೆಂಬಲಿಸಿದರು. 140 ಕೋಟಿ ಭಾರತೀಯರ ಕಠಿಣ ಪರಿಶ್ರಮ, ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಆಚರಿಸುವ ಮೂಲಕ ಈ ಹಬ್ಬವನ್ನು ಸಂಭ್ರಮಿಸೋಣ. ಭಾರತೀಯ ಉತ್ಪನ್ನಗಳನ್ನು ಖರೀದಿಸಿ, ಗರ್ವದಿಂದ ಇದು ಸ್ವದೇಶಿ ಉತ್ಪನ್ನ ಎಂದು ನೀವು ಖರೀದಿಸಿದ್ದನ್ನು ಸಾಮಾಜಿಕ ಮಾಧ್ಯಮದಲ್ಲಿಯೂ ಹಂಚಿಕೊಳ್ಳಿ. ಈ ಮೂಲಕ ಇತರರನ್ನು ಪ್ರೇರೇಪಿಸಿ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!