ಉದಯವಾಹಿನಿ, ತೈವಾನ್‌: ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಊಹಿಸಲೂ ಸಾಧ್ಯವಾಗದ ದುಃಸ್ವಪ್ನವನ್ನು ಎದುರಿಸಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಯು ಆಧ್ಯಾತ್ಮಿಕ ಕೋರ್ಸ್ ಅನ್ನು ಪಡೆಯಲು ಮುಂದಾದ್ರು. ಇದು ಅವರ ಕುಟುಂಬದಿಂದ $ 13 ಮಿಲಿಯನ್ (ರೂ. 3 ಕೋಟಿಗೂ ಹೆಚ್ಚು) ಹಣವನ್ನು ಕಳೆದುಕೊಳ್ಳುವಂತೆ ಮಾಡಿದೆ. ವೆಚ್ಚವನ್ನು ನಿಭಾಯಿಸಲು ಅವರು ತಮ್ಮ ಮನೆಯನ್ನು ಸಹ ಮಾರಾಟ ಮಾಡಬೇಕಾಯಿತು.
ಆಗಸ್ಟ್ 2013ರಲ್ಲಿ ವಾಂಗ್ ಎಂಬ ಮಹಿಳೆಯು ಜಾಂಗ್ ಮತ್ತು ಚೆನ್ ಎಂಬ ಇಬ್ಬರು ಮಹಿಳೆಯರು ನಡೆಸುವ ಆಧ್ಯಾತ್ಮಿಕ ಕೋರ್ಸ್‌ಗೆ ಸೇರಿಕೊಂಡ ಬಳಿಕ ಈ ಸಮಸ್ಯೆ ಪ್ರಾರಂಭವಾಯಿತು. ಆಧ್ಯಾತ್ಮಿಕತೆಗೆ ಒಲವು ವ್ಯಕ್ತವಾಗಿದ್ದರಿಂದ ಮಹಿಳೆಯು ಈ ಕೋರ್ಸ್‍ಗೆ ಸೇರಿದರು. ಆದರೆ, ನಡೆದದ್ದು ಮಾತ್ರ ಬೇರೆಯದ್ದೇ ಆಗಿತ್ತು. ವಾಂಗ್ ಅವರ ಮಗ ಕೂಡ ಹಲವು ವರ್ಷಗಳ ನಂತರ ಅಂದರೆ ಏಪ್ರಿಲ್ 2021ಕ್ಕೆ ಈ ಕೋರ್ಸ್‌ಗೆ ಸೇರಿದರು.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಪ್ರಕಾರ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ತೀವ್ರ ಮತ್ತು ಅವಮಾನಕರ ಅಭ್ಯಾಸಗಳಿಗೆ ಒಳಪಡಿಸಲಾಯಿತು. ಅವರನ್ನು ರಸ್ತೆಬದಿಯಲ್ಲಿ ಮಂಡಿಯೂರಿ, ಪರಸ್ಪರ ಅವಮಾನಿಸುವಂತೆ ಮತ್ತು ಇತರರ ಕಾಲ್ಬೆರಳುಗಳನ್ನು ನೆಕ್ಕುವಂತಹ ವಿಲಕ್ಷಣ ಕೃತ್ಯಗಳನ್ನು ಮಾಡುವಂತೆ ಒತ್ತಾಯಿಸಲಾಯಿತು. ಈ ಕೋರ್ಸ್‍ನಲ್ಲಿದ್ದ ನಿಯಮಗಳು ಬಹಳ ಕಟ್ಟುನಿಟ್ಟಾಗಿದ್ದವು. ಭಾಗವಹಿಸುವವರು ಭಯದಿಂದ ಅವುಗಳನ್ನು ಅನುಸರಿಸಬೇಕಾಗಿತ್ತು.

Leave a Reply

Your email address will not be published. Required fields are marked *

error: Content is protected !!