ಉದಯವಾಹಿನಿ, ಚಳಿಗಾಲ ಬಂತು ಎಂದರೆ ಅವರೆಕಾಳು ಸೀಸನ್‌ ಆರಂಭವಾಯಿತು ಅಂತಾನೆ ಅರ್ಥ. ಈಗ ಮಾರ್ಕೆಟ್‌ನಲ್ಲಿ ಅವರೆಕಾಳು 80, 100 ರೂಪಾಯಿಗೆ ಮಾರಾಟವಾದರೂ ಗ್ರಾಹಕರು ಖರೀದಿ ಮಾಡೇ ಮಾಡುತ್ತಾರೆ. ಏಕೆಂದರೆ ಅವರೆಕಾಳಿನ ಆ ರುಚಿಗಾಗಿ ಒಂದು ವರ್ಷ ತಡೆಯಲು ಆಗೋದಿಲ್ಲ. ಅವರೆಕಾಳು ಸೀಸನ್‌ ವಿಶೇಷವಾಗಿ ಚಳಿಗಾಲದ ಸ್ಪೆಷಲ್‌ ಎಂದೇ ಹೇಳಬಹುದು. ಡಿಸೆಂಬರ್‌ನಿಂದ ಆರಂಭವಾಗುವ ಅವರೆಕಾಲು ಸೀಸನ್‌ ಜನವರಿ, ಫೆಬ್ರುವರಿ, ಮಾರ್ಚ್‌ವರೆಗೂ ಇರುತ್ತದೆ. ಇದರಿಂದ ಸಾರು, ಬಿಸಿಬೇಳೆ ಬಾತ್‌, ಅವರೆಕಾಳು ಉಪ್ಪಿಟ್ಟು ಆಹ್ಹಾ.. ಬಾಯೆಲ್ಲಾ ನೀರೂತ್ತದೆ. ಅವರೆಕಾಳುಗಳಲ್ಲಿ ಫೈಬರ್‌, ಮೆಗ್ನೀಷಿಯಂ, ರಂಜಕ, ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಷಿಯಂ, ಕಬ್ಬಿಣ ಅಂಶ ಹಾಗೂ ಫೋಲೇಟ್‌ಗಳು ಸಮೃದ್ಧವಾಗಿವೆ. ಊಟದಲ್ಲಿ ಅವರೆಕಾಳು ತಿಂದರೆ ಶಕ್ತಿ ಒದಗಿಸುತ್ತದೆ. ಅಪೌಷ್ಟಿಕತೆ ವಿರುದ್ಧದ ಹೋರಾಡುತ್ತದೆ. ನಮ್ಮ ಹೃದಯಕ್ಕೆ ಅತ್ಯುತ್ತಮ ಆಹಾರ ಎಂದರೆ ಅದು ಅವರೆಕಾಳು ಎನ್ನಬಹುದು. ಹೃದಯದ ರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೇ ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಮಾಡಿ ಹಾರ್ಟಿನ ಆರೋಗ್ಯ ಕಾಪಾಡುತ್ತದೆ.
ಮೂಳೆಗಳ ಆರೋಗ್ಯಕ್ಕೂ ಅವರೆಕಾಳು ಬೇಕಾಗುತ್ತದೆ. ದೇಹದಲ್ಲಿ ಆಸ್ಟಿಯೋಬ್ಲಾಸ್ಟ್‌ ಕಾರ್ಯವನ್ನು ಹೆಚ್ಚಿಸುವುದರಿಂದ ಮೂಳೆಯ ಖನಿಜ ಸಾಂದ್ರತೆಯನ್ನು ಅಧಿಕಗೊಳಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡುವುದರಿಂದ ಹೃದ್ರೋಗ, ಪಾರ್ಶ್ವವಾಯು ಅಪಾಯ ಇರುವುದಿಲ್ಲ. ಅವರೆಕಾಳುಗಳಲ್ಲಿ ಫೈಬರ್‌, ಪ್ರೋಟಿನ್‌ ಇರುವುದರಿಂದ ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವರೆಕಾಳು ಹೆಚ್ಚು ಸಮಯ ಹೊಟ್ಟೆಯಲ್ಲಿ ಉಳಿದುಕೊಳ್ಳುವುದರಿಂದ ಬೇಗ ಹಸಿವು ಆಗಲ್ಲ. ಇದರಿಂದ ತೂಕ ನಿರ್ವಹಣೆಗೆ ಸಹಾಯ ಆಗುತ್ತದೆ.

Leave a Reply

Your email address will not be published. Required fields are marked *

error: Content is protected !!