ಉದಯವಾಹಿನಿ, ನವದೆಹಲಿ: ನಮ್ಮ ಅಜ್ಜಂದಿರು ಧರಿಸುತ್ತಿದ್ದ ಸಾಂಪ್ರದಾಯಿಕ ಪಟಾಪಟಿ ಚಡ್ಡಿ (ಒಳ ಉಡುಪು) ನೆನಪಿದೆಯೇ? ಅಜ್ಜನ ಕಾಲದ ಈ ಚಡ್ಡಿ ಅಳಿವಿನಂಚಿಗೆ ಹೋಗಿತ್ತು. ಆದರೀಗ ಹೊಸ ಲುಕ್‍ನೊಂದಿಗೆ ಫ್ಯಾಶನ್ ಲೋಕಕ್ಕೆ ಮರಳಿದೆ. ಒಂದು ಕಾಲದಲ್ಲಿ ಹಳೆಯದು ಎಂದು ಪರಿಗಣಿಸಿ ತಿರಸ್ಕಾರಕ್ಕೊಳಪಟ್ಟ ಪಟಾಪಟಿ ಚಡ್ಡಿ ಇದೀಗ ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿದ್ದು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳು ಇದನ್ನು ಹೆಮ್ಮೆಯಿಂದ ಧರಿಸುತ್ತಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಈ ವಿಂಟೇಜ್ ವಿನ್ಯಾಸವನ್ನು ಪ್ರದರ್ಶಿಸುತ್ತಿರುವ ಜನರ ಗುಂಪೊಂದು ಕಂಡುಬಂದಿದೆ. ಈ ವಿಡಿಯೊದಲ್ಲಿ, ವಿಮಾನ ನಿಲ್ದಾಣದ ಆವರಣದಲ್ಲಿ ಯುವಕರು ಮತ್ತು ಯುವತಿಯರು ವಿವಿಧ ಬಣ್ಣಗಳಲ್ಲಿ ಕ್ಲಾಸಿಕ್ ಪಟಾಪಟಿ ಚಡ್ಡಿ (ಒಳ ಉಡುಪು) ಗಳನ್ನು ಧರಿಸಿ ಸ್ಟೈಲ್ ಆಗಿ ನಡೆಯುವುದನ್ನು ತೋರಿಸುತ್ತದೆ.
ಒಂದು ಕಾಲದಲ್ಲಿ ಕೇವಲ 50 ರಿಂದ 100 ರೂ.ಗೆ ಮಾರಾಟವಾಗುತ್ತಿದ್ದ ಪಟ್ಟೆ ಒಳ ಉಡುಪುಗಳ ಬೆಲೆ ಇದೀಗ 2,500 ರಿಂದ 11,000 ರೂ.ಗಳವರೆಗೆ ಇದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಪಟಾಪಟಿ ಚಡ್ಡಿ (ಒಳ ಉಡುಪು) ಗಳು ಮತ್ತೆ ಮಾರುಕಟ್ಟೆಗೆ ಬಂದ ಬಗ್ಗೆ ಬಹಳಷ್ಟು ಹೇಳಿದ್ದರು. ಪ್ರತಿಯೊಬ್ಬ ಭಾರತೀಯ ಅಜ್ಜಂದಿರು ಹೊಂದಿದ್ದ ಕಾಲಾತೀತ ಉಡುಪನ್ನು ಹಲವರು ನೆನಪಿಸಿಕೊಂಡರು. ಇದಕ್ಕಿಟ್ಟ ವಿಭಿನ್ನ ಹೆಸರುಗಳ ಬಗ್ಗೆ ಕೆಲವರು ಹಂಚಿಕೊಂಡರು.

Leave a Reply

Your email address will not be published. Required fields are marked *

error: Content is protected !!