ಉದಯವಾಹಿನಿ, ಬಾಲಿವುಡ್ ನಟಿ ಊರ್ವಶಿ ರೌಟೇಲಾ ಧರಿಸಿದ್ದ, ಬಟರ್ ಫ್ಲೈ ಅಂದರೇ ಚಿಟ್ಟೆಯ ಬಿಗ್ ಇಯರಿಂಗ್ಸ್ ಫ್ಯಾಷನ್ ಪ್ರಿಯರ ಗಮನ ಸೆಳೆದಿದೆ. ಸದ್ಯ ಡಿಸೈನರ್ ಇಯರಿಂಗ್ಸ್ ಆಕ್ಸೆಸರೀಸ್ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿದೆ.ಫ್ಯಾಷೆನೇಬಲ್ ಊರ್ವಶಿ ಚಾಯ್ಸ್
ಪ್ರತಿ ಬಾರಿಯು ಯಾವುದೇ ಇವೆಂಟ್‌ನಲ್ಲಿ ಪಾಲ್ಗೊಂಡರೂ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಧರಿಸುವ ಒಂದೊಂದು ಔಟ್‌ಫಿಟ್ ಹಾಗೂ ಆಕ್ಸೆಸರೀಸ್ ಹೈಲೈಟಾಗುತ್ತವೆ. ಅಡಿಯಿಂದ ಮುಡಿಯವರೆಗಿನ ಅವರ ಫ್ಯಾಷನೆಬಲ್ ಆಕ್ಸೆಸರೀಸ್‌ಗಳು ಟ್ರೆಂಡ್‌ಗೆ ಸೇರುತ್ತವೆ. ಮಾತ್ರವಲ್ಲ, ಅವರ ಸ್ಟೈಲ್ ಹಾಗೂ ಫ್ಯಾಷನ್ ಸ್ಟೇಟ್‌ಮೆಂಟ್‌ಗಳು ಆಯಾ ಸೀಸನ್‌ನ ಹೊಸ ಫ್ಯಾಷನ್‌ಗೆ ನಾಂದಿ ಹಾಡುತ್ತವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಇದೇ ರೀತಿ ಈ ಬಾರಿಯೂ ಆವಾರ್ಡ್ ಸಮಾರಂಭದಲ್ಲಿ ಫಾಲ್ಗೊಂಡ ಊರ್ವಶಿ ಮತ್ತೊಮ್ಮೆ ತಮ್ಮದೇ ಆದ ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಫ್ಯಾಷನ್ ಟ್ರೆಂಡ್ ಸೆಟ್ಟರ್ ಆಗಿದ್ದಾರೆ. ಪೆಪ್ಲಮ್ ಶೈಲಿಯ ಗೋಲ್ಡನ್ ಕಾರ್ಸೆಟ್ ಶಿಮ್ಮರಿಂಗ್ ಟಾಪ್ ಹಾಗೂ ಗೋಲ್ಡನ್ ಸ್ಕರ್ಟ್‌ಗೆ ಬಿಗ್ ಶಾಂಡೆಲಿಯರ್ ಶೈಲಿಯ ಸ್ಟೋನ್ಸ್ ಇರುವಂತಹ ಬಂಗಾರ ವರ್ಣದ ಬಟರ್‌ಫ್ಲೈ ಇಯರಿಂಗ್ಸ್ ಅನ್ನು ನಟಿ ಊರ್ವಶಿ ಮ್ಯಾಚ್ ಮಾಡಿದ್ದಾರೆ. ಇದು ಸದ್ಯ ಫ್ಯಾಷನ್ ಲೋಕದಲ್ಲಿ ಹಂಗಾಮ ಎಬ್ಬಿಸಿದೆ. ಫ್ಯಾಷನ್ ವಿಮರ್ಶಕರ ಪ್ರಶಂಸೆಯನ್ನೂ ಗಳಿಸಿದೆ. ಅಂದ ಹಾಗೆ, ಬಟರ್ ಫ್ಲೈ ಇಯರಿಂಗ್ಸ್ ಫ್ಯಾಷನ್ ಇಂದಿನದಲ್ಲ! ಬದಲಿಗೆ ಸಾಕಷ್ಟು ವರ್ಷಗಳ ಹಿಂದೆಯೇ ಈ ಫ್ಯಾಷನ್ ಚಾಲ್ತಿಯಲ್ಲಿತ್ತು. ಮೊದಮೊದಲು ಫಂಕಿ ಲುಕ್‌ನಲ್ಲಿ ಇವು ಪ್ರಚಲಿತದಲ್ಲಿದ್ದವು. ಆದರೆ, ಇದೀಗ ಸೆಲೆಬ್ರೆಟಿಗಳ ಔಟ್‌ಫಿಟ್‌ಗೆ ತಕ್ಕಂತೆ ಡಿಸೈನರ್‌ಗಳು ಬದಲಿಸಿದ್ದಾರೆ. ಎನ್ನುತ್ತಾರೆ ಜ್ಯುವೆಲ್ ಡಿಸೈನರ್‌ಗಳು.
