ಉದಯವಾಹಿನಿ, ವೆಲ್ಲಿಂಗ್ಟನ್: 13 ವರ್ಷದ ಬಾಲಕನೊಬ್ಬ ಇಂಟರ್ನೆಟ್‌ನಲ್ಲಿ ಇ-ಕಾಮರ್ಸ್ ಮಾರುಕಟ್ಟೆಯಿಂದ ಹೈ-ಪವರ್ ಅಯಸ್ಕಾಂತಗಳನ್ನು ಖರೀದಿಸಿ ನುಂಗಿರುವ ಆಘಾತಕಾರಿ ಘಟನೆ ನ್ಯೂಜಿಲ್ಯಾಂಡ್‍ನಲ್ಲಿ ನಡೆದಿದೆ. 100 ಕ್ಕೂ ಹೆಚ್ಚು ಅಯಸ್ಕಾಂತಗಳನ್ನು ನುಂಗಿದ ನಂತರ ಬಾಲಕ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಈ ವೇಳೆ ವೈದ್ಯರು ಅವನ ಕರುಳಿನ ಒಂದು ಭಾಗವನ್ನು ತೆಗೆದುಹಾಕಬೇಕಾಯಿತು. ಈ ಸುದ್ದಿ ಇದೀಗ ವೈರಲ್ ಆಗಿದೆ.
2014ರಿಂದ ದೇಶೀಯ ಅಥವಾ ವೈಯಕ್ತಿಕ ಬಳಕೆಗಾಗಿ ಸಣ್ಣ, ಹೈ-ಪವರ್ ಅಯಸ್ಕಾಂತಗಳ ಮಾರಾಟವನ್ನು ನ್ಯೂಜಿಲ್ಯಾಂಡ್ ನಿಷೇಧಿಸಿದ ನಂತರವೂ ಈ ಆತಂಕಕಾರಿ ಘಟನೆ ಸಂಭವಿಸಿದೆ. ಜನಪ್ರಿಯ ಆನ್‌ಲೈನ್ ಮಾರುಕಟ್ಟೆಯಾದ ಟೆಮುನಿಂದ ಆರ್ಡರ್ ಮಾಡಿದ್ದ 100ಕ್ಕೂ ಹೆಚ್ಚು ಆಯಸ್ಕಾಂತಗಳನ್ನು ಬಾಲಕ ನುಂಗಿದ್ದ. ಶಸ್ತ್ರಚಿಕಿತ್ಸೆಗೆ ಒಂದು ವಾರದ ಮೊದಲು ಆ ಹದಿಹರೆಯದ ಬಾಲಕ ಸುಮಾರು 80 ರಿಂದ 100 ಸಣ್ಣ ಆಯಸ್ಕಾಂತಗಳನ್ನು ನುಂಗಿದ್ದ ಎಂದು ಟೌರಂಗಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ತಿಳಿಸಿದಿದ್ದಾರೆ. ಅವೆಲ್ಲವನ್ನೂ ಬಾಲಕ ಆನ್ಲೈನ್ ಮಾರುಕ್ಟಟೆಯಾದ ಟೆಮುವಿನಲ್ಲಿ ಖರೀದಿಸಿದ್ದನು.
ಈ ಅಯಸ್ಕಾಂತಗಳನ್ನು ದೇಶೀಯ ಅಥವಾ ವೈಯಕ್ತಿಕ ಬಳಕೆಗಾಗಿ ಮಾರಾಟ ಮಾಡುವುದನ್ನು ನ್ಯೂಜಿಲೆಂಡ್ ಕಾನೂನಿನಿಂದ ನಿಷೇಧಿಸಲಾಗಿದ್ದರೂ, ಶಿಕ್ಷಣ ಸಂಸ್ಥೆಗಳು ಅವುಗಳನ್ನು ಬೋಧನಾ ಉದ್ದೇಶಗಳಿಗಾಗಿ ಅಥವಾ ಇತರ ಉತ್ಪನ್ನಗಳಲ್ಲಿ ಬಳಸುವುದಕ್ಕಾಗಿ ಇನ್ನೂ ಅನುಮತಿ ಇದೆ. ಈ ಅಯಸ್ಕಾಂತಗಳನ್ನು ಮಕ್ಕಳ ಸ್ನೇಹಿ ಆಟಿಕೆಗಳಾಗಿ ಪ್ರಚಾರ ಮಾಡಲಾಗಿದೆ ಮತ್ತು ಫಿಡ್ಜೆಟ್ ಆಟಿಕೆಗಳಾಗಿ ಅಥವಾ ವಿವಿಧ ಆಕಾರಗಳನ್ನು ರಚಿಸಲು ಬಳಸಬಹುದಾದ ಸೆಟ್‌ಗಳಲ್ಲಿ ಬರುತ್ತವೆ.

Leave a Reply

Your email address will not be published. Required fields are marked *

error: Content is protected !!