ಉದಯವಾಹಿನಿ, ಭಾರತ – ಪಾಕಿಸ್ತಾನದ ನಡುವೆ ಯುದ್ಧ ನಡೆದಾಗಲೆಲ್ಲ ಪಾಕ್ ಸೋಲುತ್ತ ಬಂದಿದೆ. ಪಾಕ್ ಯುದ್ಧದಲ್ಲಿ ನಿರ್ಣಯ ಕ್ರಮಗಳನ್ನು ತೆಗೆದುಕೊಳ್ಳದಿರುವುದೇ ಇದಕ್ಕೆ ಕಾರಣ ಎಂದು ಅಮೆರಿಕದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅವರು ANIಗೆ ನೀಡಿದ ಸಂದರ್ಶನಲ್ಲಿ ಭಾರತ ಮತ್ತು ಪಾಕಿಸ್ತಾನದ ಯುದ್ಧ ಬಗ್ಗೆ ಹೇಳಿದ್ದಾರೆ. 2001ರಲ್ಲಿ ಸಂಸತ್ತಿನ ದಾಳಿಯ ನಂತರ ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳು ದೊಡ್ಡ ಮಟ್ಟದ ಯುದ್ಧ ಮಾಡುವ ಸಾಧ್ಯತೆ ಇದೆ ಎಂದು ಅಂದುಕೊಂಡಿದ್ದೆವು, ಆದರೆ ಪಾಕಿಸ್ತಾನವು ಭಾರತದೊಂದಿಗಿನ ಯಾವುದೇ ಸಾಂಪ್ರದಾಯಿಕ ಯುದ್ಧವನ್ನು ಗೆಲ್ಲುತ್ತಿರಲಿಲ್ಲ, ಪಾಕ್ ತಕ್ಷಣವೇ ಕದನ ವಿರಾಮಕ್ಕೆ ಹೋಗುತ್ತಿತ್ತು ಎಂದು ಹೇಳಿದ್ದಾರೆ. 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಜಾನ್ ಕಿರಿಯಾಕೌ, ವಾಷಿಂಗ್ಟನ್ ಮತ್ತು ಇಸ್ಲಾಮಾಬಾದ್ ನಡುವಿನ ಅಸಮಾಧಾನ ಮತ್ತು ಪಾಕಿಸ್ತಾನದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಬಗ್ಗೆ ಎಎನ್ಐಗೆ ನೀಡಿದ ಸಂದರ್ಶನಲ್ಲಿ ಮಾತನಾಡಿದ್ದಾರೆ.
ಭಾರತದೊಂದಿಗಿನ ಯುದ್ಧದಿಂದ ಪಾಕಿಸ್ತಾನ ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವಿನ ನಿಜವಾದ ಯುದ್ಧದಿಂದ ಏನೂ ಒಳ್ಳೆಯದಾಗುವುದಿಲ್ಲ, ಏಕೆಂದರೆ ಪಾಕಿಸ್ತಾನಿಗಳು ಸೋಲುತ್ತಾರೆ. ನಾನು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಾತನಾಡುತ್ತಿಲ್ಲ. ನಾನು ಸಾಂಪ್ರದಾಯಿಕ ಯುದ್ಧದ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ಪಾಕಿಸ್ತಾನ ನಿರಂತರವಾಗಿ ಭಾರತೀಯರನ್ನು ಪ್ರಚೋದಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ. 2016ರಲ್ಲಿ ಸರ್ಜಿಕಲ್ ಸ್ಟ್ರೈಕ್, 2019ರಲ್ಲಿ ಬಾಲಕೋಟ್ ದಾಳಿ ಹಾಗೂ ಪ್ರಸ್ತುತ ವರ್ಷ ಅಂದರೆ 2025ರಲ್ಲಿ ಭಾರತದ ಪಹಲ್ಗಾಮ್ಗೆ ದಾಳಿ ಮಾಡಿ ಅಮಾಯಕ ನಾಗರಿಕರನ್ನು ಹತ್ಯೆ ಮಾಡಿ, ನಂತರ ಆಪರೇಷನ್ ಸಿಂಧೂರದ ಸೇರಿದಂತೆ ಹಲವು ವರ್ಷಗಳಿಂದ ಗಡಿಯಾಚೆಯಿಂದ ಭಯೋತ್ಪಾದಕರು ನಡೆಸಿದ ದಾಳಿಗಳಿಂದ ಭಾರತ ಹಿಂದೆ ಸರಿದಿಲ್ಲ, ಅದಕ್ಕೆ ತಕ್ಕ ಉತ್ತರವನ್ನು ನೀಡಿದೆ ಎಂದು ಹೇಳಿದ್ದಾರೆ.
