ಉದಯವಾಹಿನಿ , ಇಸ್ಲಾಮಾಬಾದ್:‌ ಆರ್ಥಿಕ ದುಸ್ಥಿತಿಗೆ ಸಿಲುಕಿರುವ ಪಾಕಿಸ್ತಾನವನ್ನ ಶೆಹಬಾಜ್ ಷರೀಫ್ ಆಡಳಿತ ಇನ್ನಷ್ಟು ಸಾಲದ ಕೂಪಕ್ಕೆ ತಳ್ಳಿದೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ, ಪ್ರಸಕ್ತ ವರ್ಷ ಜೂನ್‌ ವೇಳೆಗೆ ಪಾಕಿಸ್ತಾನದ ಸಾಲದ ಮಿತಿ 2,86,832 ಶತಕೋಟಿ ಡಾಲರ್‌ ಅಂದ್ರೆ ಸುಮಾರು 80.6 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿಗೆ ಏರಿಕೆಯಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದ್ರೆ 13 ಪ್ರತಿಶತದಷ್ಟು ಹೆಚ್ಚಾಗಿದೆ.
ಹೌದು. ಪಾಕಿಸ್ತಾನದ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ 2025ರ ಅಂಕಿ-ಅಂಶದ ಪ್ರಕಾರ, ಜೂನ್ 2025ರ ಅಂತ್ಯದ ವೇಳೆಗೆ ಪಾಕಿಸ್ತಾನದ ಒಟ್ಟು ಸಾಲ 80.6 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿಗಳಷ್ಟಾಗಿದೆ. ಇದರಲ್ಲಿ 54.5 ಲಕ್ಷ ಕೋಟಿ ದೇಶಿಯ ಸಾಲ, 26 ಲಕ್ಷ ಕೋಟಿ ಬಾಹ್ಯ ಸಾಲ ಇದೆ. ಅಲ್ಲದೇ ದೇಶದ ಸಾಲದ ಪ್ರಮಾಣ ಜಿಡಿಪಿಗಿಂತ 70% ಏರಿಕೆಯಾಗಿದೆ ಎನ್ನಲಾಗಿದೆ.

ಸಾಲದ ಹೊರೆ ಹೆಚ್ಚಾಗಿದ್ದೇಕೆ..?: ದೇಶಿಯ ಸಾಲವು ವರ್ಷದಿಂದ ವರ್ಷಕ್ಕೆ ಶೇ.15 ರಷ್ಟು ಏರಿಕೆಯಾಗುತ್ತಿದೆ. ಇದರೊಂದಿಗೆ ಬಾಹ್ಯ ಸಾಲವು ವಾರ್ಷಿಕ ಶೇ.6 ರಷ್ಟು ಹೆಚ್ಚಾಗುತ್ತಾ ಬಂದಿದೆ. ಐಎಂಎಫ್‌, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB), ಇತರ ಬಹುಪಕ್ಷೀಯ ಸಂಸ್ಥೆಗಳಿಂದ ಸಂಸ್ಥೆಗಳಿಂದಲೂ ನಿಧಿಗಳು ಹರಿದುಬಂದಿದ್ದು, ಸಾಲದ ಹೊರೆ ಹೆಚ್ಚಾಗುತ್ತ ಸಾಗಿದೆ

Leave a Reply

Your email address will not be published. Required fields are marked *

error: Content is protected !!