ಉದಯವಾಹಿನಿ, ರೆಡ್ ವೈನ್ (Red Wine) ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಇದು ಹಣ್ಣುಗಳಿಂದ ತಯಾರಾಗುವುದರಿಂದ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ ಎಂದು ನಂಬಲಾಗಿದೆ. ಮಾತ್ರವಲ್ಲ ಇದರ ಸೇವನೆ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಇದರ ಬಗ್ಗೆ ನಾವು ಎಂದಾದರೂ ಯೋಚಿಸಿದ್ದೇವೆಯೇ? ನಿಜವಾಗಿಯೂ ಇದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿ ಇರಬಹುದೇ? ಹೌದು. ನಾವು ಯಾರೂ ಕೂಡ ಇಂತಹ ವಿಷಯಗಳ ಬಗ್ಗೆ ಹೆಚ್ಚಿನ ತರ್ಕಕ್ಕೆ ಮುಂದಾಗುವುದಿಲ್ಲ. ಯಾರಾದರೂ ಏನನ್ನಾದರೂ ಹೇಳಿದರೆ ಅದೇ ಸತ್ಯ ಎಂದು ನಂಬುತ್ತೇವೆ. ಹಾಗಾದರೆ ರೆಡ್ ವೈನ್ ಆರೋಗ್ಯಕ್ಕೆ ಒಳ್ಳೆಯದಲ್ಲವೇ? ನಿಜವಾಗಿಯೂ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯೇ ಎಂಬಿತ್ಯಾದಿ ವಿಷಯಗಳ ಕುರಿತ ಮಾಹಿತಿ ಈ ಸ್ಟೋರಿಯಲ್ಲಿದೆ.
ಕೆಂಪು ವೈನ್ ಅಥವಾ ರೆಡ್ ವೈನ್ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ ಇದನ್ನು ಮಿತವಾಗಿ ಸೇವನೆ ಮಾಡಿದರೆ ಮಾತ್ರ ಒಳ್ಳೆಯದು. ಅತಿಯಾಗಿ ಸೇವನೆ ಮಾಡಿದರೆ ಅಮೃತವೂ ವಿಷವಾಗುವಂತೆ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಜೊತೆಗೆ ಇದರಲ್ಲಿ ಉತ್ಕರ್ಷಣ ನಿರೋಧಕಗಳಿದ್ದು ಇದರ ಸೇವನೆಯಿಂದ ಹೃದಯ ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ಆಲ್ಕೋಹಾಲ್ ಸೇವನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳೂ ಉಂಟಾಗಬಹುದು, ಆದ್ದರಿಂದ ಮಿತವಾಗಿ ಕುಡಿಯುವುದು ಒಳ್ಳೆಯದು.
ಹಣ್ಣುಗಳ ಸೇವನೆ ಮಾಡಿ ರೆಸ್ವೆರಾಟ್ರೊಲ್ ಪಡೆಯಿರಿ: ಆಲ್ಕೋಹಾಲ್ ಆರೋಗ್ಯಕರ ಪಾನೀಯ ಎಂದು ಎಂದಿಗೂ ಸಾಬೀತಾಗಿಲ್ಲ. ಆರೋಗ್ಯ ತಜ್ಞೆ ಸೋನಲ್ ಹಾಲೆಂಡ್ ಹೇಳುವಂತೆ ವೈನ್ ಹೃದಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಅತಿಯಾಗಿ ಕೆಂಪು ವೈನ್ ಕುಡಿಯುವುದು ಅಷ್ಟೊಂದು ಪ್ರಯೋಜನಕಾರಿಯಲ್ಲ. ಆಹಾರದಲ್ಲಿ ಹಣ್ಣುಗಳು, ದ್ರಾಕ್ಷಿ ಮತ್ತು ಬೀಜಗಳನ್ನು ಸೇರಿಸುವ ಮೂಲಕ ಅಗತ್ಯವಿರುವ ರೆಸ್ವೆರಾಟ್ರೊಲ್ ಪಡೆಯಬಹುದು. ಹಾಗಾಗಿ ರೆಡ್ ವೈನ್ ಅನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಸೂಕ್ತವಾಗಿದೆ. ಅದೇ ರೀತಿ, ಮದ್ಯಪಾನ ಮಾಡುವವರಲ್ಲಿ ಸಿಹಿ ವೈನ್ ಅಗ್ಗ ಎಂಬ ತಪ್ಪು ಕಲ್ಪನೆಇದೆ ಆದರೆ ಇದು ನಿಜವಲ್ಲ. ಜಗತ್ತಿನಲ್ಲಿ ಅನೇಕ ರೀತಿಯ ಸಿಹಿ ವೈನ್‌ಗಳಿದ್ದು ಅದರಲ್ಲಿ ಕೆಲವು ತುಂಬಾ ದುಬಾರಿಯಾಗಿದೆ. ಅದರಲ್ಲಿಯೂ ಫ್ರಾನ್ಸ್ ಮತ್ತು ಹಂಗೇರಿಯ ವೈನ್‌ಗಳು ಅವುಗಳ ಗುಣಮಟ್ಟದ ಕಾರಣದಿಂದಾಗಿ ದುಬಾರಿಯಾಗಿದೆ
