ಉದಯವಾಹಿನಿ, ನವದೆಹಲಿ: ಇದೇ ಅಕ್ಟೋಬರ್ 6ರಂದು ಉತ್ತರ ದೆಹಲಿಯ ಗಾಂಧಿ ವಿಹಾರ್ ಬಿಲ್ಡಿಂಗ್‌ನ ಫ್ಲಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಅಲ್ಲಿಗೆ ಧಾವಿಸಿದ್ದ ಅಗ್ನಿಶಾಮಕ ಸಿಬ್ಬಂದಿ 35 ವರ್ಷದ ಯುಪಿಎಸ್ಸಿ ಆಕಾಂಕ್ಷಿ ರಾಮಕೇಶ್ ಮೀನಾ ಅವರ ಸುಟ್ಟ ದೇಹವನ್ನ ಪತ್ತೆ ಮಾಡಿದ್ರು. ಮೊದಲಿಗೆ ಇದು AC (ಹವಾ ನಿಯಂತ್ರಣ) ಸ್ಫೋಟದಿಂದ ಆಗಿರುವ ದುರಂತ ಎಂದೇ ನಂಬಲಾಗಿತ್ತು. ಆದ್ರೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ, ದೆಹಲಿ ಪೊಲೀಸರ ಅನುಮಾನ, ಕೃತ್ಯದ ಬಳಿಕ ಸಿಕ್ಕ ಒಂದೇ ಒಂದೇ ಸುಳಿವು ರೋಚಕ ಸತ್ಯ ಬಯಲಿಗೆಳೆಯುವಲ್ಲಿ ಯಶಸ್ವಿಯಾಯ್ತು. ಈ ಪ್ರಕರಣದ ಮಾಸ್ಟರ್ ಮೈಂಡ್, ಸೂತ್ರಧಾರಿ ಎಲ್ಲವೂ 21 ವರ್ಷದ ಫೋರೆನ್ಸಿಕ್ ಸೈನ್ಸ್ ವಿದ್ಯಾರ್ಥಿನಿ ಅಮೃತಾ. ಹತ್ಯೆಯಾದ ರಾಮಕೇಶ್ ಮೀನಾ ಆಕೆಯ ಲಿವ್ ಇನ್ ಪಾರ್ಟ್ನರ್.
ಎಕ್ಸ್ ಬಾಯ್‌ಫ್ರೆಂಡ್ ಜೊತೆ ಸೇರಿ ಹಾಕಿದ್ಳು ಸ್ಕೆಚ್: ಯೆಸ್. ಅಮೃತಾ, ಮೀನಾ ಇಬ್ಬರು ಲಿವ್ ಇನ್ ಪಾರ್ಟ್ನರ್. ಆದ್ರೆ ರಾಮಕೇಶ್ ಅಮೃತಾಳ ಖಾಸಗಿ ವಿಡಿಯೋವನ್ನ ರಹಸ್ಯವಾಗಿ ರೆಕಾರ್ಡ್ ಮಾಡಿಟ್ಟುಕೊಂಡಿದ್ದ. ವಿಡಿಯೋಗಳನ್ನ ಡಿಲೀಟ್ ಮಾಡುವಂತೆ ಕೇಳಿಕೊಂಡರೂ ನಿರಾಕರಿಸಿದ್ದ. ಇದರಿಂದ ಅಮೃತಾ, ಮೀನಾ ಮೇಲೆ ಸಿಟ್ಟಾಗಿದ್ದಳು. ಕೊನೆಗೆ ಮೊರಾಬಾದ್‌ನಲ್ಲಿ ಗ್ಯಾಸ್ ಏಜೆನ್ಸಿ (Gas Agency) ಹೊಂದಿದ್ದ ತನ್ನ ಎಕ್ಸ್ ಬಾಯ್‌ಫ್ರೆಂಡ್‌ಗೆ (Boyfriend) ಈ ವಿಷಯವನ್ನೆಲ್ಲ ತಿಳಿಸಿದಳು. ಆ ನಂತರ ಇಬ್ಬರು ಒಟ್ಟಾಗಿ ಸೇರಿ ಕೊಲೆಗೆ ಪ್ಲ್ಯಾನ್ ಮಾಡಿದ್ರು. ತಾನು ಫೋರೆನ್ಸಿಕ್ ಸೈನ್ಸ್ ವಿದ್ಯಾರ್ಥಿನಿ ಆಗಿದ್ದರಿಂದ ಕೃತ್ಯ ನಡೆದ ಸ್ಥಳ ಸಂಪೂರ್ಣ ಸುಟ್ಟುಹೋದ್ರೆ, ಫೋರೆನ್ಸಿಕ್ ಅಧಿಕಾರಿಗಳಿಗೆ ಯಾವುದೇ ಸಾಕ್ಷ್ಯ ಸಿಗಲ್ಲ ಅಂತ ಅಮೃತಾ ನಂಬಿದ್ದಳು. ಇತ್ತ ಎಕ್ಸ್ ಬಾಯ್‌ಫ್ರೆಂಡ್ ಗ್ಯಾಸ್ ಎಜೆನ್ಸಿ ಹೊಂದಿದ್ದರಿಂದ ಸುಲಭವಾಗಿ ಗ್ಯಾಸ್ ಸಿಲಿಂಡರ್ ಲಭ್ಯವಿರುತ್ತಿತ್ತು. ಜೊತೆಗೆ ಅವನಿಗೆ ಸ್ಫೋಟಿಸುವುದೂ ಗೊತ್ತಿತ್ತು. ಇಬ್ಬರಷ್ಟೇ ಈ ಕೆಲಸಕ್ಕೆ ಸಾಲೋದಿಲ್ಲ ಅಂತ ಎಕ್ಸ್‌ಬಾಯ್‌ಫ್ರೆಂಡ್ ಗೆಳೆಯನನ್ನೂ ಸೇರಿಸಿಕೊಂಡು ಸ್ಕೆಚ್ ಹಾಕಿದ್ರು.
