ಉದಯವಾಹಿನಿ, ಬಿಗ್‌ಬಾಸ್‌ನ ಪ್ರತಿ ಸೀಸನ್‌ನಲ್ಲೂ ಪ್ರೇಮಕಥೆ ಹುಟ್ಟೋದು ಸಾಮಾನ್ಯ. ಈ ಸೀಸನ್‌ನಲ್ಲಿ ದ್ವೇಷದ ಕಥೆ ಹೆಚ್ಚಾಗಿದ್ದರಿಂದ ಪ್ರೇಮಕಥೆ ಕಳೆದುಹೋಗಿತ್ತು. ಗಿಲ್ಲಿ, ಕಾವ್ಯ ಸ್ನೇಹಿತರಂತಿದ್ದಾರೆ. ಇದು ನಿಜವಾದ ಪ್ರೇಮಕಥೆಯಲ್ಲ ಅನ್ನೋದು ವೀಕ್ಷಕರಿಗೆ ತಿಳಿದಿದೆ. ಆದರೆ ಇವರ ಮಧ್ಯೆ ಅಸಲಿ ಲವ್‌ಬರ್ಡ್ಸ್ ಹುಟ್ಟುಕೊಂಡಿದ್ದಾರೆ. ಆ ಜೋಡಿಯೇ ರಾಶಿಕಾ ಹಾಗೂ ಸೂರಜ್.
ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಸೂರಜ್ ಸಿಂಗ್ ಮನೆಗೆ ಎಂಟ್ರಿ ಕೊಟ್ಟ ದಿನವೇ ಮನೆಯಲ್ಲಿರೋ ಹುಡುಗಿಯರ ಮಧ್ಯೆ ಒಬ್ಬರಿಗೆ ರೋಸ್ ಕೊಡುವ ಚಟುವಟಿಕೆಯಲ್ಲಿ ರಾಶಿಕಾಗೆ ಕೆಂಪು ಗುಲಾಬಿ ಕೊಟ್ಟಿದ್ದರು. ಹಾಗೆಯೇ ಶುರುವಾದ ಕಣ್ಣೋಟಗಳು ಕಲೆತು ಬಲಿತು ಜೋಡಿಯಾಗಿದೆ. ಮಾಡೆಲ್/ಶೆಫ್ ಆಗಿರುವ ಸೂರಜ್ ರಾಶಿಕಾರನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸೂರಜ್ ಸೌಮ್ಯ ಸ್ವಭಾವಕ್ಕೆ ಹ್ಯಾಡ್ಸಂ ಲುಕ್‌ಗೆ ರಾಶಿಕಾ ಬೌಲ್ಡ್ ಆದಂತಿದೆ. ಸದ್ಯಕ್ಕಂತೂ ಮನೆಯಲ್ಲಿ ಪ್ರಯಣ ಪಕ್ಷಿಗಳಂತೆ ಈ ಜೋಡಿ ಸುತ್ತಾಡುತ್ತಿದೆ. ಇಷ್ಟು ಸಾಲದು ಎನ್ನುವಂತೆ ಅಶ್ವಿನಿ ಗೌಡ, ಸೂರಜ್‌ರನ್ನು ಮಗ ಎಂದು ಕರೆದಿದ್ದಾರೆ. ಹಿಂದೊಮ್ಮೆ ರಾಶಿಕಾರನ್ನು ಸೊಸೆ ಎಂದು ಕರೆದಿದ್ದರು.
