ಉದಯವಾಹಿನಿ, ಹಲಸಿನ ಹಣ್ಣಿನ ಸಿಹಿ ಹಾಗೂ ಈ ಹಣ್ಣಿನ ಆಹ್ಲಾದಕರ ಪರಿಮಳವನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಅನೇಕರು ಈ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಚೆನ್ನಾಗಿ ಹಣ್ಣಾದ ಹಲಸಿನ ತೊಳೆಗಳ ರುಚಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಬೇಸಿಗೆ ಕಾಲದಲ್ಲಿ ಸಿಗುವ ತರಕಾರಿಗಳಲ್ಲಿ ಹಲಸು ಕೂಡ ಒಂದು. ಕೆಲವರು ಇದನ್ನು ಸಸ್ಯಾಹಾರಿಗಳ ಮಾಂಸಾಹಾರ ಆಹಾರ ಎಂದೂ ಕರೆಯುವುದುಂಟು. ಹಲಸು ತರಕಾರಿಯಾಗಿ ಮತ್ತು ಹಣ್ಣಾಗಿ ಬಳಕೆ ಮಾಡಲಾಗುತ್ತದೆ. ಹಲಸಿನ ಹಣ್ಣನ್ನು ವಿವಿಧ ತರಹದ ರೆಸಿಪಿ ಮಾಡಲು ಬಳಕೆ ಮಾಡಲಾಗುತ್ತದೆ.
ಹಸಿ ಹಲಸಿನ ಕಾಯಿಯನ್ನು ತರಕಾರಿಯಾಗಿ ಸೇವನೆ ಮಾಡಲಾಗುತ್ತದೆ. ಹಲಸು ಕಾಯಿಯಿಂದ ಮತ್ತು ಹಣ್ಣಾದಾಗ ಸಿಹಿ, ರಸಭರಿತ ಮತ್ತು ಹಣ್ಣನ್ನು ವಿವಿಧ ರೀತಿಯಲ್ಲಿ ಸೇವನೆ ಮಾಡುತ್ತಾರೆ. ಅದರ ರುಚಿಯ ಹೊರತಾಗಿಯೂ ಹಲಸಿನ ಹಣ್ಣು ಮತ್ತೊಂದು ವೈಶಿಷ್ಟ್ಯವನ್ನು ಹೊಂದಿದೆ. ಹಲಸಿನ ಬೀಜಗಳಲ್ಲಿ ಅನೇಕ ಪೋಷಕಾಂಶ ತತ್ವಗಳಿವೆ. ಇದರಿಂದಾಗಿ ಇದನ್ನು ಅಗ್ಗದ ಬಾದಾಮಿ ಎಂದೂ ಕರೆಯುತ್ತಾರೆ. ಅನೇಕರು ಹಲಸಿನ ತೊಳೆಗಳನ್ನು ತಿಂದು ಅದರಲ್ಲಿನ ಬೀಜವನ್ನು ಎಸೆಯುವುದುಂಟು. ಆದರೆ, ಹಣ್ಣಿನಲ್ಲಿ ಅಷ್ಟೇ ಅಲ್ಲ. ಈ ಹಣ್ಣಿನ ಬೀಜದಲ್ಲಿಯೂ ಬೆಟ್ಟದಷ್ಟು ಪ್ರಯೋಜನಗಳಿವೆ.
ಹಲಸಿನ ಬೀಜಗಳಲ್ಲಿರುವ ಆರೋಗ್ಯ ಪ್ರಯೋಜನೆಗಳು ಇಂತಿವೆ…ಹಲಸಿನ ಬೀಜಗಳಲ್ಲಿ ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬುಗಳು (ಒಮೆಗಾ 3, ಒಮೆಗಾ 6), ವಿಟಮಿನ್ ಎ, ಸಿ, ಇ, ಬಿ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು ಮುಂತಾದ ಖನಿಜಗಳಿವೆ,
ಹಲಸಿನ ಬೀಜಗಳಲ್ಲಿ ಲಿಗ್ನಾನ್‌, ಐಸೊಫ್ಲೇವೋನ್‌, ಸಪೋನಿನ್‌ ಮತ್ತು ಫೈಟೊನ್ಯೂಟ್ರಿಯೆಂಟ್‌ ಇದ್ದು, ಇದು ಕ್ಯಾನ್ಸರ್ ಅಧಿಕ ರಕ್ತದೊತ್ತಡ, ಉರಿಯೂತ ಮತ್ತು ಹುಣ್ಣು ಸಮಸ್ಯೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳನ್ನು ದೂರಾಗಿಸಲು ಪ್ರಯೋಜನಕಾರಿಯಾಗಿದೆ.
ಹಲಸಿನ ಬೀಜಗಳಲ್ಲಿ ಜಾಕಲಿನ್ ಅಂಶ ಇದ್ದು, ಇದು ಇಮ್ಯುನೊಮಾಡ್ಯುಲೇಟರಿ ಗುಣಲಕ್ಷಣಗಳನ್ನು ಹೊಂದಿದೆ. ಇದಲ್ಲದೆ, ಹಲಸಿನ ಬೀಜಗಳಳ್ಲಿ ಆಲ್-ಟ್ರಾನ್ಸ್-ಕ್ಯಾರೋಟಿನ್ ಹೇರಳವಾಗಿದ್ದು, ಇದು ಕಣ್ಣಿನ ಆರೋಗ್ಯವನ್ನು ಮತ್ತು ಹೃದಯರಕ್ತನಾಳದ ಕಾಯಿಲೆ, ಕ್ಯಾನ್ಸರ್, ಕಣ್ಣಿನ ಪೊರೆ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ದೀರ್ಘಕಾಲದ ಕ್ಷೀಣಗೊಳ್ಳುವ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!