ಉದಯವಾಹಿನಿ, ಬೇಕಾಗುವ ಪದಾರ್ಥಗಳು.. ಮಶ್ರೂಮ್ 400 ಗ್ರಾಂ ಕಾರ್ನ್ ಫ್ಲೋರ್- 4-6 ಚಮಚ, ಮೈದಾ ಹಿಟ್ಟು- 3 ಚಮಚ, ಉಪ್ಪು-ರುಚಿಗೆ ತಕ್ಕಷ್ಟುವೈಟ್ ಪೆಪ್ಪರ್- ಅರ್ಧ ಚಮಚ, ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು, ಶುಂಠಿ-ಬೆಳ್ಳುಳ್ಳಿ- ಸಣ್ಣಗೆ ಕತ್ತರಿಸಿದ್ದು, ಈರುಳ್ಳಿ-, ಕ್ಯಾಪ್ಸಿಕಂ- 1, ಹಸಿಮೆಣಸಿನ ಕಾಯಿ ಪೇಸ್ಟ್- ತರಿತರಿಯಾಗಿ ರುಬ್ಬಿದ್ದು 2 ಚಮಚ, ಗ್ರೀನ್ ಚಿಲ್ಲಿ ಸಾಸ್- 1 ಚಮಚ, ವಿನೇಗರ್ – 1 ಚಮಚ, ನಿಂಬೆ ಹಣ್ಣಿನ ರಸ- 1 ಚಮಚ
ಮಾಡುವ ವಿಧಾನ… ಮೊದಲಿಗೆ ಚೆನ್ನಾಗಿ ಮಶ್ರೂಮ್ ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ಅದಕ್ಕೆ ಕಾರ್ನ್ ಫ್ಲೋರ್, ಮೈದಾ ಹಿಟ್ಟು, ಉಪ್ಪು ಹಾಗೂ ವೈಟ್ ಪೆಪ್ಪರ್ ಪೌಡರ್ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ. ಕಾದ ನಂತರ ಅದಕ್ಕೆ ಮಸಾಲೆ ಮಿಶ್ರತ ಮಶ್ರೂಮ್ ಗಳನ್ನು ಹಾಕಿ ಚೆನ್ನಾಗಿ ಕರಿದುಕೊಳ್ಳಿ ಬಳಿಕ ಮತ್ತೊಂದು ಬಾಣಲೆಯನ್ನು ಒಲೆಯ ಮೇಲಿಟ್ಟು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಸಣ್ಣಗೆ ಕತ್ತರಿಸಿದ ಶುಂಠಿ-ಬೆಳ್ಳುಳ್ಳಿ, ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಹುರಿದುಕೊಳ್ಳಿ. ಬಳಿಕ ಹಸಿಮೆಣಸಿನಕಾಯಿ ಪೇಸ್ಟ್ ಹಾಕಿ. 1 ನಿಮಿಷ ಕೈಯಾಡಿಸಿದ ಬಳಿಕ ಗ್ರೀನ್ ಚಿಲ್ಲಿ ಸಾಸ್, ವಿನೇಗರ್, ನಿಂಬೆಹಣ್ಣಿನ ರಸ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದೀಗ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಚಿಲ್ಲಿ ಮಶ್ರೂಮ್ ಸವಿಯಲು ಸಿದ್ಧ.
