ಉದಯವಾಹಿನಿ, ನವದೆಹಲಿ: ಚರಂಡಿಯಲ್ಲಿ ಇನ್ಶೂರೆನ್ಸ್ ಏಜೆಂಟ್‌ನ ಶವ ಪತ್ತೆಯಾಗಿರುವ ಘಟನೆ ದೆಹಲಿಯ ಸಮೀಪದ ಫರೀದಾಬಾದ್‌ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಯುವತಿ ಹಾಗೂ ಆಕೆ ಫಿಯಾನ್ಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತನನ್ನು ಚಂದರ್ ಎಂದು ಗುರುತಿಸಲಾಗಿದ್ದು, ಬ್ಲಾಕ್‌ಮೇಲ್ ಮಾಡುತ್ತಿದ್ದ ಕಾರಣ ಆತನನ್ನು ಕೊಂದಿರುವುದಾಗಿ ಯುವತಿ ಒಪ್ಪಿಕೊಂಡಿದ್ದಾಳೆ. ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಮಹಿಳೆ ಲಕ್ಷ್ಮಿ(Laxmi) ತನ್ನ ಪ್ರಿಯಕರ ಕೇಶವ್(Keshav)ನೊಂದಿಗೆ ಸೇರಿ ಚಂದರ್ ಎಂಬ ಇನ್ಶುರೆನ್ಸ್ ಏಜೆಂಟ್‌ನನ್ನು ಕೊಂದಿದ್ದಾರೆ. ಬ್ಲಾಕ್‌ಮೇಲ್ ಮಾಡುತ್ತಿದ್ದ ಕಾರಣಕ್ಕೆ ಈ ಕೊಲೆ(Murder Case) ನಡೆದಿದೆ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಫರೀದಾಬಾದ್‌ನ ಚರಂಡಿಯಲ್ಲಿ ಚಂದರ್ ಅವರ ಶವ ಪತ್ತೆಯಾಗಿದ್ದು, ಶವದ ಬಳಿ ನಿಲ್ಲಿಸಿದ್ದ ಬೈಕ್‌ನ ನಂಬರಿನಿಂದ ಅವರ ಗುರುತು ಪತ್ತೆಯಾಗಿದೆ. ತನಿಖೆಯಲ್ಲಿ ಚಂದರ್ ಅವರು ಫರೀದಾಬಾದ್‌ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿ ಪೂರ್ವ ದೆಹಲಿಯ ವಿನೋದ್ ನಗರದಲ್ಲಿ ವಾಸಿಸುತ್ತಿದ್ದರೆಂಬುದು ತಿಳಿದುಬಂದಿದೆ.ಶವದ ತಲೆಯ ಮತ್ತು ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ. ಚಂದರ್ ಅವರ ಸಹೋದರ ಮದನ್ ಗೋಪಾಲ್ ನೀಡಿದ ದೂರು ಆಧಾರವಾಗಿ ಕೊಲೆ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
