ಉದಯವಾಹಿನಿ, ಸಿನಿಮಾ ರಂಗದಲ್ಲಿ ಅಕಾಲಿಕ ಮರಣ ಹೊಂದಿದ್ದವರು ಅನೇಕರಿದ್ದಾರೆ. ಅಂತವರಲ್ಲಿ ನಟಿ ಸೌಂದರ್ಯ ಕೂಡ ಒಬ್ಬರು. ಭಾರತೀಯ ಸಿನಿಮಾ ಇಂಡಸ್ಟ್ರಿ ಯಲ್ಲಿ ಬಹು ಭಾಷೆ ಕಲಾವಿದೆಯಾಗಿ ಇವರು ಸಿನಿಮಾ ರಂಗಕ್ಕೆ ನೀಡಿದ್ದ ಕೊಡುಗೆ ಅಪಾರ ಎಂದೆ ಹೇಳಬಹುದು. 19ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಇವರು ಕನ್ನಡ, ತಮಿಳು, ತೆಲುಗಿನಲ್ಲಿ ಪ್ರಸಿದ್ಧಿ ಪಡೆದು ಸೂಪರ್ ಸ್ಟಾರ್ ರಜನೀಕಾಂತ್ ಅಮಿತಾಭ್ ಬಚ್ಚನ್ ವಿಷ್ಣುವರ್ಧನ್, ರವಿಚಂದ್ರನ್ ಸೇರಿದಂತೆ ಅನೇಕ ಪ್ರಸಿದ್ಧ ನಟರೊಂದಿಗೆ ತೆರೆ ಹಂಚಿಕೊಂಡಿದ್ದರು. ಇಂದು ಅವರು ನಮ್ಮೊಂದಿಗೆ ಇಲ್ಲವಾಗಿದ್ದರೂ ಅವರ ಸಿನಿಮಾಗಳ ಮೂಲಕ ಜೀವಂತವಾಗಿ ಅಭಿಮಾನಿಗಳ ಮನದಲ್ಲಿ ನೆಲೆಸಿದ್ದಾರೆ. ಇವರೊಂದಿಗಿನ ಸಿನಿಮಾ ಜರ್ನಿ ಬಗ್ಗೆ ಬಹುಭಾಷಾ ನಟಿ ರಮ್ಯಾಕೃಷ್ಣ ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿ, ಅವರ ಅಗಲುವಿಕೆ ಸಿನಿಮಾ ರಂಗಕ್ಕೆ ತುಂಬಲಾಗದ ನಷ್ಟವಿದ್ದಂತೆ ಎಂದು ಅವರು ಹೇಳಿದ್ದಾರೆ.
ನಟಿ ರಮ್ಯಾಕೃಷ್ಣ ಅವರು ತೆಲುಗು ಕಿರುತೆರೆಯ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಸಂದರ್ಭದಲ್ಲಿ ಅವರು ತಮ್ಮ ಸಿನಿಮಾ ಜೀವನ ಹಾಗೂ ಇತರ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇದೆ ವೇಳೆ ನಟಿ ಸೌಂದರ್ಯ ಜೊತೆಗಿನ ಒಡನಾಟದ ಬಗ್ಗೆ ಅವರು ಮಾತನಾಡಿ, ಪಡೆಯಪ್ಪ, ಅಮ್ಮೋರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದ ತಮ್ಮ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.
