
ಉದಯವಾಹಿನಿ,ರಾಮನಗರ: ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ ವಿಚಾರ ಯಾವುದನ್ನೂ ನಾನು ಮಾತನಾಡಲ್ಲ. ನಾವು ಮಾತನಾಡಿದಷ್ಟು ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಸಚಿವರಿಗೆ ಕೋಕ್ ಕೊಡುವ ವಿಚಾರ ಕುರಿತು ರಾಮನಗರದಲ್ಲಿ ಮಾತನಾಡಿದ ಅವರು, ಯಾರು ಏನು ಮಾತನಾಡಿದ್ದಾರೋ ಗೊತ್ತಿಲ್ಲ. ಎಲ್ಲರಿಗೂ ಸೇರಿ ಹೇಳ್ತೀನಿ, ಮಾತನಾಡಿದಷ್ಟು ಪಕ್ಷಕ್ಕೆ ಹಾನಿ. ಸಾಧ್ಯವಾದಷ್ಟು ಎಲ್ಲರೂ ಸೈಲೆಂಟ್ ಆಗಿ ಇರಿ. ಬಿಜೆಪಿಯಲ್ಲಿರುವಷ್ಟು (BJP) ಬಣ ನಮ್ಮಲ್ಲಿ ಇಲ್ಲ. ನಮ್ಮಲ್ಲಿ ಏನೇ ಇದ್ದರೂ ನಾಲ್ಕು ಗೋಡೆ ಮಧ್ಯೆ ಚರ್ಚೆ ಮಾಡಬೇಕು. ಮಾಧ್ಯಮಗಳ ಮುಂದೆ ಮಾತನಾಡಿದ್ರೆ ವಿಪಕ್ಷಗಳಿಗೆ ಆಹಾರ ಆಗುತ್ತೇವೆ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದ್ದಾರೆ.
