ಉದಯವಾಹಿನಿ, ಸಿಯೋಲ್: ರಷ್ಯಾದಿಂದ ಭಾರತ ತೈಲ ಖರೀದಿ ಮಾಡುತ್ತಿದೆ ಎನ್ನುವ ಕಾರಣ ನೀಡಿ ಭಾರತದ ಉತ್ಪನ್ನಗಳ ಮೇಲೆ ಶೇಕಾ ೫೦ ರಷ್ಟು ಸುಂಕ ವಿಧಿಸಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅಪಾರ ಗೌರವಿದೆ ಹಾಡಿ ಹೊಗಳಿದ್ದು ಶೀಘ್ರದಲ್ಲಿಯೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಭಾರತದ ಉತ್ಪನ್ನಗಳ ಮೇಲೆ ಶೇಕಡಾ ೨೫ ರಷ್ಟು ಜೊತೆಗೆ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದಕ್ಕೆ ಹೆಚ್ಚುವರಿ ಶೇಕಡ ೨೫ ರಷ್ಟು ಸೇರಿದಂತೆ ಶೇಕಡ ೫೦ ರಷ್ಟು ತೆರಿಗೆ ವಿಧಿಸಿರುವ ಅಮೆರಿಕಾ ಅಧ್ಯಕ್ಷರು, ಶೀಘ್ರದಲ್ಲಿ ಅಮೆರಿಕ- ಭಾರತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿವೆ ಎನ್ನುವ ಸುಳಿವು ನೀಡಿದ್ದಾರೆ.
ದಕ್ಷಿಣ ಕೊರಿಯಾದ ಜಿಯೊಂಗ್ಜುನಲ್ಲಿ ನಡೆದ ಎಪಿಇಸಿ ಸಿಇಓಗಳ ಭೋಜನಕೂಟದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ “ಅತ್ಯಂತ ಸುಂದರ ವ್ಯಕ್ತಿ” ಭಾರತ ಮತ್ತು ಅಮೆರಿಕ ಶೀಘ್ರದಲ್ಲೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿವೆ ಎಂದು ಹೇಳಿದ್ದಾರೆ.
ವಿಶ್ವದ ಎರಡು ದೊಡ್ಡ ಆರ್ಥಿಕತೆ ದೇಶಗಳ ನಡುವಿನ ವ್ಯಾಪಾರ ಒಪ್ಪಂದ ಕೇವಲ ಸಮಯದ ಪ್ರಶ್ನೆಯಾಗಿದೆ. ಒಪ್ಪಂದದ ಕುರಿತಾದ ಮಾತುಕತೆಗಳು ತಿಂಗಳುಗಳಿಂದ ಎಳೆದಾಡುತ್ತಿವೆ, ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮತ್ತು ಭಾರತ ರಷ್ಯಾದಿಂದ ತೈಲ ಖರೀದಿಸುವುದರ ಕುರಿತ ಸುಂಕಗಳ ಕುರಿತಾದ ಗದ್ದಲಗಳು ಇದಕ್ಕೆ ಅಡ್ಡಿಯಾಗಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
