ಉದಯವಾಹಿನಿ, ನಮ್ಮಲ್ಲಿ ಅನೇಕರಿಗೆ ಅನ್ನ ಸೇವನೆ ಮಾಡದೆ ಒಂದು ದಿನವನ್ನೂ ಕಳೆಯಲು ಸಾಧ್ಯವೇ ಇಲ್ಲ. ಮೂರು ಹೊತ್ತು ಅನ್ನ ಕೊಟ್ಟರು ಇಷ್ಟ ಪಟ್ಟು ತಿನ್ನುವವರಿದ್ದಾರೆ. ಎಷ್ಟೇ ಮೃಷ್ಟಾನ್ನ ಭೋಜನ ಮುಂದೆ ಇಟ್ಟರೂ ಕೂಡ ಅನ್ನವಿಲ್ಲದೆ ಊಟ ಅಪೂರ್ಣವೆಂದು ಪರಿಗಣಿಸುತ್ತಾರೆ. ಆದರೆ ಆರೋಗ್ಯ ಕಾಪಾಡಿಕೊಳ್ಳಲು ಅನೇಕರು ಅನ್ನ ಸೇವನೆ ಮಾಡುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ, ಹೌದು ಕೆಲವರು ಒಂದು ಹೊತ್ತು ಮಾತ್ರ ಅನ್ನ ಸೇವನೆ ಮಾಡುತ್ತಾರೆ, ಇನ್ನು ಕೆಲವರು ಅನ್ನವನ್ನು ಮುಟ್ಟು ಕೂಡ ನೋಡುವುದಿಲ್ಲ. ಹಾಗಾದರೆ ಅನ್ನ ಬಿಟ್ಟರೆ ಆರೋಗ್ಯ ಸುಧಾರಿಸುತ್ತಾ, ಇದರಿಂದ ಪ್ರಯೋಜನವಿದೆಯೇ ಎಂಬ ಅನುಮಾನ ಹಲವರನ್ನು ಕಾಡಬಹುದು. ಅದರಲ್ಲಿಯೂ ಒಂದು ತಿಂಗಳು ಅನ್ನ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ನಿಮ್ಮ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಸಿವು, ಕಿರಿಕಿರಿ:ಅನ್ನವು ನಮ್ಮ ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುವ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ನೀವು ಇದ್ದಕ್ಕಿದ್ದಂತೆ ಅನ್ನ ಸೇವನೆ ಮಾಡುವುದನ್ನು ನಿಲ್ಲಿಸಿದರೆ, ನಿಮ್ಮ ದೇಹವು ಬದಲಾವಣೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮೊದಲ ಕೆಲವು ದಿನಗಳಲ್ಲಿ, ಹಸಿವು ಹೆಚ್ಚಾಗುವುದು, ದುರ್ಬಲತೆ ಅಥವಾ ಸ್ವಲ್ಪ ಕಿರಿಕಿರಿ ಅನುಭವಕ್ಕೆ ಬರಬಹುದು ಆದ್ದರಿಂದ, ಅನ್ನದ ಬದಲಿಗೆ ರಾಗಿ, ಬಾರ್ಲಿ, ಕ್ವಿನೋವಾ ಅಥವಾ ಕುಂಬಳಕಾಯಿ ಬೀಜಗಳಂತಹ ಇತರ ಧಾನ್ಯಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

ತೂಕ ಇಳಿಕೆ:ಅನ್ನದಲ್ಲಿ ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿದ್ದು ಸುಲಭವಾಗಿ ಜೀರ್ಣವಾಗುತ್ತದೆ. ನೀವು ಅನ್ನ ಸೇವನೆ ಮಾಡುವುದನ್ನು ಬಿಟ್ಟರೆ ನಿಮ್ಮ ದೇಹವು ಪಡೆಯುವ ಕ್ಯಾಲೊರಿಗಳು ಕಡಿಮೆಯಾಗುತ್ತವೆ. ಪರಿಣಾಮವಾಗಿ, ಇದು ತೂಕ ಇಳಿಕೆಗೆ ಕಾರಣವಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಅನ್ನ ಸೇವನೆ ಮಾಡುವುದನ್ನು ಕಡಿಮೆ ಮಾಡಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗಿರುತ್ತೆ:
ಬಿಳಿ ಅಕ್ಕಿ ಬೇಗನೆ ಜೀರ್ಣವಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ವೇಗವಾಗಿ ಹೆಚ್ಚಿಸಲು ಕಾರಣವಾಗುತ್ತದೆ. ಒಂದು ತಿಂಗಳು ಅನ್ನ ಸೇವನೆ ಮಾಡುವುದನ್ನು ಬಿಟ್ಟರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸಿಕೊಳ್ಳಬಹುದು. ಮಧುಮೇಹ ಇರುವವರಿಗೆ ಇದು ತುಂಬಾ ಪ್ರಯೋಜನಕಾರಿ.

Leave a Reply

Your email address will not be published. Required fields are marked *

error: Content is protected !!