ಉದಯವಾಹಿನಿ, ಲಾಸ್ ಏಂಜಲೀಸ್: ಮೇಘನ್ ಮಾರ್ಕೆಲ್ ಅವರು ಪ್ರಿನ್ಸ್ ಹ್ಯಾರಿಗೆ ಸಿಹಿ ಮುತ್ತು ನೀಡಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2025ರ ಮೇಜರ್ ಲೀಗ್ ಬೇಸ್‌ಬಾಲ್ ಸೀಸನ್ ನಲ್ಲಿ ಲಾಸ್ ಏಂಜಲೀಸ್ ಡಾಡ್ಜರ್ಸ್ ಗೆಲುವಿನ ಬಳಿಕ ಮೇಘನ್ ಮಾರ್ಕೆಲ್ ಅವರು ಪ್ರಿನ್ಸ್ ಹ್ಯಾರಿಗೆ ಸಿಹಿ ಮುತ್ತು ನೀಡಿ ಸಂಭ್ರಮಿಸಿದರು. ಮೇಘನ್ ಮಾರ್ಕೆಲ್ ಅವರು ಲಾಸ್ ಏಂಜಲೀಸ್ ಡಾಡ್ಜರ್ಸ್ ಗೆಲುವನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿದ್ದನ್ನು ಈ ವಿಡಿಯೊದಲ್ಲಿ ಕಾಣಬಹುದು.
2025ರ ಮೇಜರ್ ಲೀಗ್ ಬೇಸ್‌ಬಾಲ್ ಸೀಸನ್ ನಲ್ಲಿ ಲಾಸ್ ಏಂಜಲೀಸ್ ಡಾಡ್ಜರ್ಸ್ ಪಂದ್ಯವನ್ನು ಗೆದ್ದ ತಕ್ಷಣ ಮೇಘನ್ ಮಾರ್ಕೆಲ್ ಅವರು ಸಂತೋಷದಿಂದ ಕುಣಿದು ಹ್ಯಾರಿಯನ್ನು ತಬ್ಬಿಕೊಂಡು ಮುತ್ತು ನೀಡಿದರು. ಆದರೆ ಹ್ಯಾರಿ ಇದರಲ್ಲಿ ಹೆಚ್ಚು ಆಸಕ್ತರಾಗಿಲ್ಲದಂತೆ ಕಂಡು ಬಂದಿದ್ದಾರೆ.
ಸರಣಿಯ ಕೊನೆಯ ಪಂದ್ಯದಲ್ಲಿ ಟೊರೊಂಟೊ ಬ್ಲೂ ಜೇಸ್ ಅನ್ನು ಸೋಲಿಸಿದ ಲಾಸ್ ಏಂಜಲೀಸ್ ಡಾಡ್ಜರ್ಸ್ ಎರಡನೇ ಸತತ ವಿಶ್ವ ಸರಣಿಯನ್ನು ಗೆದ್ದುಕೊಂಡಿತು. ಇದನ್ನು ಸರಳವಾಗಿ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ಸಂಭ್ರಮಿಸಿದರು. ತಮ್ಮ ಖಾಸಗಿ ಹೋಮ್ ಥಿಯೇಟರ್‌ನಲ್ಲಿ ಕೊನೆಯ ಇನ್ನಿಂಗ್ಸ್ ಅನ್ನು ವೀಕ್ಷಿಸುತ್ತಿರುವ ದಂಪತಿಯ ಸಣ್ಣ ಕ್ಲಿಪ್ ಅನ್ನು ಮೇಘನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಡಾಡ್ಜರ್ಸ್ ಗೆಲುವಿನ ಬಳಿಕ ಮೇಘನ್ ಸಂತೋಷದಿಂದ ಕುಣಿದು ಹ್ಯಾರಿಯ ಬಳಿಗೆ ಹೋಗಿ ಅವರನ್ನು ತಬ್ಬಿಕೊಂಡು ಮುತ್ತಿಟ್ಟರು. ಮೇಘನ್ ಅವರ ಪ್ರತಿಕ್ರಿಯೆಗೆ ಹ್ಯಾರಿ ಆಸಕ್ತಿಯಿಲ್ಲದಂತೆ ವರ್ತಿಸಿರುವುದು ವಿಡಿಯೊದಲ್ಲಿ ಕಾಣಬಹುದು. ಮೇಘನ್ ಅವರ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ನಾಂದಿ ಹಾಡಿದೆ. ವಿಡಿಯೊ ವೈರಲ್ ಆದ ತಕ್ಷಣ ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಪ್ರತಿಕ್ರಿಯೆ ನಿಜವಾದದ್ದೇ ಅಥವಾ ನಾಟಕೀಯವೇ ಎಂದು ಚರ್ಚೆಯನ್ನು ಪ್ರಾರಂಭಿಸಿದ್ದಾರೆ.
