ಉದಯವಾಹಿನಿ, ದುಬೈ: ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ವೇಳೆ ನಿಯಮ ಉಲ್ಲಂಘನೆ ಎಸಗಿದ್ದಕ್ಕೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್‌ ಯಾದವ್‌ ಮತ್ತು ಪಾಕಿಸ್ತಾದ ಬೌಲರ್‌ ಹ್ಯಾರಿಸ್ ರೌಫ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವನ್ನು ಐಸಿಸಿ ಅಧಿಕೃತವಾಗಿ ತಿಳಿಸಿದೆ.ಸೂರ್ಯಕುಮಾರ್‌ ಯಾದವ್‌ಗೆ ಪಂದ್ಯದ ಶುಲ್ಕದ ಶೇ.30 ರಷ್ಟು ದಂಡ ವಿಧಿಸಲಾಗಿದೆ. ಹ್ಯಾರಿಸ್ ರೌಫ್ ಅವರಿಗೆ ಪಂದ್ಯದ ಸಂಭಾವನೆಯ ಶೇ.30 ರಷ್ಟು ದಂಡದ ಜೊತೆ ಎರಡು ಪಂದ್ಯಗಳಿಂದ ಅಮಾನತು ಮಾಡಲಾಗಿದೆ. ಬ್ಯಾಟರ್‌ ಸಾಹಿಬ್‌ಝಾದಾ ಫರ್ಹಾನ್ ಅವರಿಗೆ ಐಸಿಸಿ 2 ಡಿಮೆರಿಟ್ ಪಾಯಿಂಟ್ ಜೊತೆಗೆ ಕಠಿಣ ಎಚ್ಚರಿಕೆ ನೀಡಿದೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಸೂರ್ಯಕುಮಾರ್‌ ಯಾದವ್‌ ವಿರುದ್ದ ಬಿಸಿಸಿಐ ಹ್ಯಾರಿಸ್ ರೌಫ್ ಮತ್ತು ಸಾಹಿಬ್‌ಝಾದಾ ಫರ್ಹಾನ್ ವಿರುದ್ಧ ಐಸಿಸಿಗೆ ದೂರು ನೀಡಿತ್ತು. ದೂರಿನ ಬಳಿಕ ಐಸಿಸಿಯ ಶಿಸ್ತು ಸಮಿತಿ ಆಟಗಾರರನ್ನು ವಿಚಾರಣೆ ನಡೆಸಿತ್ತು. ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ-ಪಾಕ್‌ ( ಮುಖಾಮುಖಿಯಾಗಿದ್ದ ಮೊದಲ ಟೂರ್ನಿ ವಿವಾದದ ಕಣವಾಗಿ ಮಾರ್ಪಟ್ಟಿತ್ತು. ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ನೀಡಿದ ದೂರನ್ನು ಸ್ವೀಕರಿಸಿದ ಐಸಿಸಿ ಸೂರ್ಯಕುಮಾರ್‌ ಯಾದವ್‌ ಅವರ ವಿಚಾರಣೆ ನಡೆಸಿತ್ತು. ಪಿಸಿಬಿ ಸಲ್ಲಿಸಿದ ಎಲ್ಲಾ ಪುರಾವೆಗಳು ಮತ್ತು ಹೇಳಿಕೆಗಳನ್ನು ಪರಿಶೀಲಿಸಿದ ನಂತರ ಸೂರ್ಯಕುಮಾರ್ ಅವರ ಹೇಳಿಕೆಗಳು ಕ್ರೀಡಾ ಸ್ಪೂರ್ತಿಗೆ ವಿರುದ್ಧವಾಗಿದೆ. ಹೀಗಾಗಿ ಸೂರ್ಯಕುಮಾರ್‌ ವಿರುದ್ಧ ಆರೋಪ ಹೊರಿಸುವಂತೆ ಮ್ಯಾಚ್‌ ರೆಫ್ರೀ ರಿಚಿ ರಿಚರ್ಡ್ಸನ್ ತೀರ್ಮಾನಿಸಿದ್ದರು.

Leave a Reply

Your email address will not be published. Required fields are marked *

error: Content is protected !!