ಉದಯವಾಹಿನಿ, ಹೈದರಾಬಾದ್: ದೇಶದಲ್ಲಿ ಅಡುಗೆ ಅನಿಲ ಬಿಕ್ಕಟ್ಟಿನ ಮಧ್ಯೆ, ಪೆಟ್ರೋಲಿಯಂ ಸಚಿವಾಲಯ ಮಂಗಳವಾರ ಎಲ್​ಪಿಜಿ ಬಯೋಮೆಟ್ರಿಕ್ ಆಧಾರ್ ದೃಢೀಕರಣ ವನ್ನು ದೃಢೀಕರಿಸದ ಎಲ್​ಪಿಜಿ ಗ್ರಾಹಕರು ಮಾತ್ರ ಮಾಡಿಸಿಕೊಳ್ಳುವುದು ಅಗತ್ಯ. ಆದ್ರೆ ಎಲ್ಲಾ ಗ್ರಾಹಕರಿಗೆ ಅಲ್ಲ ಎಂದು ಸ್ಪಷ್ಟಪಡಿಸಿದೆ. ಎರಡು ದಿನಗಳ ಹಿಂದೆ ಸಚಿವಾಲಯ ತನ್ನ ಅಧಿಕೃತ ಎಕ್ಸ್​ ಹ್ಯಾಂಡಲ್‌ನಲ್ಲಿ ಎಲ್ಲಾ ದೇಶಿಯ ಎಲ್​ಪಿಜಿ ಗ್ರಾಹಕರು ಇ-KYC ಪೂರ್ಣಗೊಳಿಸುವುದು ಕಡ್ಡಾಯ ಎಂದು ಪೋಸ್ಟ್ ಮಾಡಿತ್ತು. ಜೊತೆಗೆ ಗ್ರಾಹಕರನ್ನು ತೈಲ ಮಾರ್ಕೆಟಿಂಗ್ ಕಂಪನಿಯ ಮೊಬೈಲ್ ಅಪ್ಲಿಕೇಶನ್ ಮತ್ತು ಆಧಾರ್ ಫೇಸ್‌ಆರ್‌ಡಿ ಅಪ್ಲಿಕೇಶನ್ ಬಳಸಿ ಪರಿಶೀಲಿಸಲು ಕೇಳಿತ್ತು. ಇದೀಗ ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ. ಮತ್ತೆ ಎಕ್ಸ್​ ನಲ್ಲಿ ಸ್ಪಷ್ಟೀಕರಣ ನೀಡಿರುವ ಸಚಿವಾಲಯ, “ಎಲ್​ಪಿಜಿ ಗ್ರಾಹಕರಿಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ವಿಷಯದ ಕುರಿತು ಕೆಲವು ಸುದ್ದಿಗಳು ಹರಿದಾಡುತ್ತಿವೆ. ಈ ನಿಟ್ಟಿನಲ್ಲಿ, ಇದು ಹೊಸ ನಿರ್ದೇಶನವಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಹೆಚ್ಚಿನ ಎಲ್​ಪಿಜಿ ಗ್ರಾಹಕರನ್ನು ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪೂರ್ಣಗೊಳಿಸುವಂತೆ ಪ್ರೋತ್ಸಾಹಿಸಲು ಸರ್ಕಾರ ನಡೆಸುತ್ತಿರುವ ಪ್ರಯತ್ನಗಳ ಒಂದು ಭಾಗ ಸಚಿವಾಲಯದ ಇತ್ತೀಚಿನ ಪೋಸ್ಟ್ ಆಗಿತ್ತು” ಎಂದು ಹೇಳಿದೆ. ಇಲ್ಲಿಯವರೆಗೆ e-KYC ಮಾಡದ ಎಲ್​ಪಿಜಿ ಗ್ರಾಹಕರಿಗೆ ಮಾತ್ರ ಈಗ e-KYC ಅವಶ್ಯಕತೆ ಅನ್ವಯಿಸುತ್ತದೆ. ನೀವು PMUY ಗ್ರಾಹಕರಲ್ಲದಿದ್ದರೆ ಮತ್ತು ಈ ಮೊದಲೇ e-KYC ಮಾಡಿದ್ದರೆ, ನೀವು ಅದನ್ನು ಮತ್ತೆ ಮಾಡುವ ಅಗತ್ಯವಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

 

Leave a Reply

Your email address will not be published. Required fields are marked *

error: Content is protected !!