ಉದಯವಾಹಿನಿ, ಖ್ಯಾತ ಮಾಡೆಲ್ ಮತ್ತು ರಿಯಾಲಿಟಿ ಸ್ಟಾರ್ ಕೆಂಡಲ್ ಜೆನ್ನರ್ ಬೋಲ್ಡ್ ಫೋಟೋ ಶೂಟ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಅಂತರರಾಷ್ಟ್ರೀಯ ಫ್ಯಾಷನ್ ಐಕಾನ್ ಮತ್ತು ಉದ್ಯಮಿ ಆಗಿರುವ ಅವರು ‘ಕೀಪಿಂಗ್ ಅಪ್ ವಿಥ್ ದಿ ಕಾರ್ಡಶಿಯನ್ಸ್’ ರಿಯಾಲಿಟಿ ಟಿವಿ ಶೋ ಮೂಲಕ ಹೆಚ್ಚು ಹೆಸರು ಗಳಿಸಿದರು. ಸದ್ಯ ಅವರು ನವೆಂಬರ್ 3 ರಂದು ತಮ್ಮ 30ನೇ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಬೀಚ್ ನಲ್ಲಿ ಮಸ್ತ್ ಎಂಜಾಯ್ ಮಾಡಿ ರುವ ಅವರು ನಗ್ನವಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.. ಕೆಂಡಾಲ್ ತಮ್ಮ ವೈಯಕ್ತಿಕ ಹುಟ್ಟುಹಬ್ಬದ ಆಚರಣೆಯ ಹಲವಾರು ಫೋಟೋ ಹಾಗೂ ವಿಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಭಾರೀ ವೈರಲ್ ಆಗಿವೆ.
ಕೆಂಡಾಲ್ ಜೆನ್ನರ್ ಈ ಭಾರಿಯ ಬರ್ತೆಡೇ ಖುಷಿಯಲ್ಲಿ ನಗ್ನವಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಸುಂದರ ಬೀಚ್‌ನ ಸ್ಥಳದಲ್ಲಿ ಬೋಲ್ಡ್ ಪೋಸ್ ನೀಡಿದ್ದಾರೆ. ಕೆಂಡಾಲ್ ಸಮುದ್ರ ತೀರದಲ್ಲಿ ಸೂರ್ಯನ ಬೆಳಕನ್ನು ಆನಂದಿಸುತ್ತಾ, ಪ್ರತಿ ಕ್ಷಣವನ್ನು ಸಂತೋಷದಿಂದ ಕಳೆಯುತ್ತಿರುವ ದೃಶ್ಯಗಳು ವೈರಲ್ ಆದ ವಿಡಿಯೊ ಹಾಗೂ ಫೋಟೋ ಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ತನ್ನ 30 ಹುಟ್ಟುಹಬ್ಬವನ್ನು ಬೀಚ್ ನಲ್ಲಿ ಸೆಲೆಬ್ರೆಟ್ ಮಾಡಿರುವ ಕೆಂಡಾಲ್ ರಾತ್ರಿಯಲ್ಲಿ ಬೀಚ್‌ನಲ್ಲಿ “ಹ್ಯಾಪಿ ಬರ್ತ್‌ಡೇ ಕೆಂಡಾಲ್” ಎಂದು ಬರೆದಿರುವ ದೊಡ್ಡ ಬೆಳ್ಳಿ ಬಲೂನ್‌ಗಳ ಮುಂದೆ ಫೋಟೋಗೆ ಪೋಸ್ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!