ಉದಯವಾಹಿನಿ, ಬಿಗ್ ಬಾಸ್ ಮನೆಯಲ್ಲಿ ತಮ್ಮ ಮಾತು ಮತ್ತು ಸ್ವಭಾವಗಳಿಂದ ಸ್ಪರ್ಧಿಗಳಿಂದಲೇ ಈ ವಾರ ಎಲಿಮಿನೇಷನ್‌ನಿಂದ ಬಚಾವ್ ಆಗಬೇಕಿದೆ. ಸದ್ಯ ಫ್ಯಾಮಿಲಿಗಳಿಂದ ಪತ್ರಗಳು ಮನೆಯೊಳಗೆ ಬರುತ್ತಿದೆ. ನಿಮ್ಮನ್ನು ಪ್ರೀತಿಸುವ ವೀಕ್ಷಕರು ಈ ಮನೆಗೆ ಆಗಮಿಸಿದ್ದಾರೆ ಎಂದು ಬಿಗ್ ಬಾಸ್ ಅನೌನ್ಸ್ ಮಾಡಿದ್ದರು.
ಇಷ್ಟೂ ದಿನ ಸೈಲೆಂಟ್ ಆಗಿರುತ್ತಿದ್ದ ಮಾಳು ಅವರು ಒಂದು ಕ್ಷಣ ಅಬ್ಬರಿಸಿದ್ದಾರೆ. ಮುಂದಿನ ವಾರದ ಕ್ಯಾಪ್ಟನ್ ಯಾರಾಗಬೇಕು ಎಂಬುದು ನಿರ್ಧರಿಸಲು ಜನರು ವೋಟ್ ಮಾಡಲು ಬಿಗ್ ಬಾಸ್ ಮನೆಯ ಒಳಗೆ ಬಂದಿದ್ದಾರೆ. ಜನರ ಎದುರಿನಲ್ಲಿ ಮಾಳು ನಿಪನಾಳ ಖಡಕ್ ಆಗಿ ಮಾತನಾಡಿದ್ದಾರೆ.
ಬಂದ ದಿನದಿಂದ ಮಾಳು ಸ್ಟ್ಯಾಂಡ್ ತೆಗೆದುಕೊಳ್ಳಲ್ಲ. ಯಾಕೆಗೆ ಜಗಳ ಮಾಡ್ತಾರೆ ಅನ್ನೋದು ಅವರಿಗೆ ಗೊತ್ತಿಲ್ಲ. ಜಗಳಕ್ಕೆ ಸ್ಟ್ಯಾಂಡ್ ತೆಗೆದುಕೊಂಡರೇ ಹುಚ್ಚು ಹಿಡಿಯೋದು ಗ್ಯಾರಂಟಿ. ಕ್ಯಾಪ್ಟನ್ ಆಗುತ್ತೇನೆ. ಹಳ್ಳಿ ಹುಡುಗನ ಗತ್ತು, ಗಮ್ಮತ್ತು, ತಾಕತ್ತು ತೋರಿಸಿಯೇ ತೋರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ. ಅವರ ಮಾತು ಕೇಳಿ ವೀಕ್ಷಕರಿಗೆ ಖುಷಿ ಆಗಿದೆ. ಈ ಮನೆಗೆ ಬಂದಾಗಿನಿಂದ ಮಾಳು ನಿಪನಾಳ ಅವರು ಅಷ್ಟು ಕಾಣಿಸಿಕೊಂಡಿಲ್ಲ ಎಂದು ಅಲ್ಲಿರುವ ಸ್ಪರ್ಧಿಗಳೇ ಆರೋಪ ಮಾಡುತ್ತಾರೆ. ಇನ್ನೊಂದು ಕಡೆ ಮಾಳು ನಿಪನಾಳ ಅವರು ಮನೆಗೆ ಹೋಗಬೇಕು ಎಂದು ಕೂಡ ಹೇಳಿದ್ದರು.
