
ಉದಯವಾಹಿನಿ,: ಮನೆ ಕಟ್ಟುವಾಗ ಹೇಗೆ ವಾಸ್ತು( ಬೇಕೇ ಬೇಕೊ ಹಾಗೂ ಮನೆ ನಿರ್ವಹಣೆಯ ವಿಷಯದಲ್ಲೂ ವಾಸ್ತು ಅಗತ್ಯವಾಗುತ್ತದೆ. ಅದರಲ್ಲಿಯೂ ನಮ್ಮ ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಮಹತ್ವ ಇದ್ದು, ವಾಸ್ತು ಪ್ರಕಾರ ಮನೆಯಲ್ಲಿ ಇರಿಸಲಾಗಿರುವ ಪ್ರತಿಯೊಂದೂ ವಸ್ತು ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಹೊಂದಿದೆ ಅಂತಹ ಸಂದರ್ಭಗಳಲ್ಲಿ ವಸ್ತುಗಳನ್ನು ಇರಿಸುವ ಮೊದಲು ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದು ಮುಖ್ಯ. ವಾಸ್ತು ನಿಯಮಗಳನ್ನು ನಿರ್ಲಕ್ಷಿಸುವುದು ಜೀವನದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ.
ಆದರೆ ಕೆಲವರು ಈ ವಾಸ್ತುವಿನ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಮುಖ್ಯವಾಗಿ ಮನೆಯ ಶೋಕೇಸ್ ತುಂಬಿಸಲು ತರುವಂತಹ ನಾನಾ ನಾನಾ ನಮೂನೆಯ ಪ್ರತಿಮೆಗಳು, ಫ್ಯಾನ್ಸಿ ಐಟಂಗಳು, ಗಾಜಿನ ವಸ್ತುಗಳು. ಇದಕ್ಕೆ ಈ ಪ್ರಾಣಿ ಪಕ್ಷಿಗಳ ಫೋಟೋ – ಪ್ರತಿಮೆಗಳು ಹೊರತಾಗಿಲ್ಲ. ಆದರೆ ಮನೆಯ ಅಂದವನ್ನು ಹೆಚ್ಚಿಸಲು ತರುವ ಇಂತಹ ಶೋ ಫೀಸ್ ಗಳಿಂದ ಒಳ್ಳೆದಾಗುತ್ತದೆಯೇ ಅಥವಾ ಕೆಡಕು ಆಗುತ್ತದೆಯೇ ಎಂದು ಹಿಂದುಮುಂದು ಯೋಚಿಸದೇ ತಂದು ಇಟ್ಟುಬಿಡುತ್ತೇವೆ.
ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಮನೆಗೆ ತರುವ ಪ್ರತಿಯೊಂದು ವಸ್ತುಗಳನ್ನು ಇಡಲು ಸೂಕ್ತ ಸ್ಥಳವಿದ್ದು, ಅವುಗಳನ್ನು ತಪ್ಪಾದ ಸ್ಥಳದಲ್ಲಿ ಇಡುವುದು ಸಮಸ್ಯೆಗೆ ಆಹ್ವಾನ ಕೊಟ್ಟಂತೆ ಎಂದು ಹೇಳಲಾಗುತ್ತದೆ.
