ಉದಯವಾಹಿನಿ, ಬಹುತೇಕರು ದಿನದಲ್ಲಿ ಒಂದು ಬಾರಿಯಾದರೂ ಗೋಡಂಬಿಯನ್ನು ಸಾಮಾನ್ಯವಾಗಿ ಸೇವಿಸುತ್ತಾರೆ. ಇವುಗಳನ್ನು ಸಿಹಿ ತಿನಿಸುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಗೋಡಂಬಿ ಮಸಾಲೆಯುಕ್ತ ತಿನಿಸುಗಳಲ್ಲಿ ಹಾಕಲಾಗುತ್ತದೆ. ಗೋಡಂಬಿ ಭಕ್ಷ್ಯಗಳಿಗೆ ಉತ್ತಮ ಬಣ್ಣ ಹಾಗೂ ರುಚಿಯನ್ನು ನೀಡುತ್ತದೆ. ಗೋಡಂಬಿಯನ್ನು ನೇರವಾಗಿ ಇಲ್ಲವೇ ಹುರಿದು ತಿನ್ನಬಹುದು.
ಗೋಡಂಬಿ ಸೇವನೆಯಿಂದ ಅನೇಕ ಪ್ರಯೋಜನಗಳಿವೆ. ಆರೋಗ್ಯ ತಜ್ಞರು ಪ್ರತಿದಿನ ಗೋಡಂಬಿಯನ್ನು ಸೇವಿಸಲು ಸಲಹೆ ನೀಡುತ್ತಾರೆ. ನೇರವಾಗಿ ಗೋಡಂಬಿ ತಿನ್ನುವುದಕ್ಕಿಂತ ಗೋಡಂಬಿ ಹಾಲನ್ನು ಸಹ ತಯಾರಿಸಬಹುದು. ಗೋಡಂಬಿ ಹಾಲು ಕೂಡ ಆರೋಗ್ಯಕ್ಕೆ ಅತ್ಯುತ್ತಮ ಲಾಭಗಳನ್ನು ನೀಡುತ್ತದೆ. ದೇಹಕ್ಕೆ ವಿವಿಧ ಪೋಷಕಾಂಶಗಳನ್ನು ನೀಡುತ್ತದೆ.
ಪ್ರತಿದಿನ ಬೆಳಿಗ್ಗೆ ಒಂದು ಗ್ಲಾಸ್ ಗೋಡಂಬಿ ಹಾಲು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಗೋಡಂಬಿಯನ್ನು ನೇರವಾಗಿ ತಿನ್ನಲು ಆಗದವರು ಅದರಿಂದ ಹಾಲು ತಯಾರಿಸಿ ಕುಡಿಯುವುದು ಒಳ್ಳೆಯದು. ಗೋಡಂಬಿ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಯಾವೆಲ್ಲಾ ಆರೋಗ್ಯದ ಪ್ರಯೋಜನಗಳನ್ನು ಲಭಿಸುತ್ತದೆ ಎಂಬುದನ್ನು ತಿಳಿಯೋಣ. ಹೈಬಿಪಿ ಹೊಂದಿರುವವರಿಗೆ ಒಳ್ಳೆಯದು: ಗೋಡಂಬಿ ಬೀಜಗಳಲ್ಲಿ ಏಕಾಪರ್ಯಾಪ್ತ ಮತ್ತು ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳಿವೆ. ಗೋಡಂಬಿಯಲ್ಲಿ ಆರೋಗ್ಯಕರ ಕೊಬ್ಬು ಇದೆ. ಪ್ರತಿದಿನ ಗೋಡಂಬಿ ಹಾಲನ್ನು ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಜೊತೆಗೆ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದರಿಂದ ರಕ್ತನಾಳಗಳಲ್ಲಿನ ಅಡಚಣೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ಹೃದಯದ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಗೋಡಂಬಿ ಬೀಜಗಳಲ್ಲಿ ಅಧಿಕ ಪ್ರಮಾಣದಲ್ಲಿ ಮೆಗ್ನೀಸಿಯಮ್ ಹಾಗೂ ಪೊಟ್ಯಾಸಿಯಮ್ ಇದೆ. ಇದರ ಸೇವನೆಯಿಂದ ಬಿಪಿಯನ್ನು ಹತೋಟಿಯಲ್ಲಿ ಇಡಲು ಸಾಧ್ಯವಾಗುತ್ತವೆ. ಗೋಡಂಬಿ ಹಾಲನ್ನು ಪ್ರತಿದಿನ ಸೇವನೆಯು ಅಧಿಕ ರಕ್ತದೊತ್ತಡ ಇರುವವರಿಗೆ ಒಳ್ಳೆಯದು.
ಹೃದಯದ ಆರೋಗ್ಯಕ್ಕೆ ಅತ್ಯುತ್ತಮ: ಗೋಡಂಬಿ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯದ ಆರೋಗ್ಯ ಕಾಪಾಡಲು ಸಹಾಯವಾಗುತ್ತದೆ. ಗೋಡಂಬಿ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಮೆಗ್ನೀಸಿಯಮ್, ತಾಮ್ರ, ವಿಟಮಿನ್ ಕೆ, ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಇರುತ್ತವೆ. ಈ ಖನಿಗಳು ಮೂಳೆಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿರಿಸಲು ಕೆಲಸ ಮಾಡುತ್ತದೆ. ಗೋಡಂಬಿ ಹಾಲನ್ನು ಪ್ರತಿದಿನ ಸೇವಿಸುವುದರಿಂದ ಮೂಳೆಗಳ ಆರೋಗ್ಯ ಅತ್ಯುತ್ತಮವಾಗಿದೆ.
