ಉದಯವಾಹಿನಿ, ಅನೇಕ ಜನರು ಪ್ರಸ್ತುತ ದಿನಮಾನಗಳಲ್ಲಿ ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಧಿಕ ತೂಕ ಕಳೆದುಕೊಳ್ಳಲು ಆಹಾರ ಕ್ರಮ ಮತ್ತು ಕಠಿಣ ವ್ಯಾಯಾಮದ ನಿಮಯಗಳನ್ನು ಅನುಸರಿಸುತ್ತಿದ್ದಾರೆ. ಅಧಿಕ ತೂಕದ ಕಾರಣದಿಂದ ಕೆಲವರು ವಿವಿಧ ರೋಗಗಳಿಗೆ ಒಳಗಾಗುತ್ತಿದ್ದಾರೆ. ದೇಹದ ಕೊಬ್ಬು ಕಳೆದುಕೊಳ್ಳಲು ಹಲವು ವಿಭಿನ್ನ ಮಾರ್ಗಗಳನ್ನು ಪ್ರಯತ್ನಿಸುತ್ತಿದ್ದಾರೆ.
ವ್ಯಾಯಾಮ ಮಾಡುವುದರ ಜೊತೆಗೆ ಪೌಷ್ಟಿಕ ಆಹಾರವನ್ನು ಸೇವಿಸುತ್ತಿದ್ದಾರೆ. ತೂಕ ಇಳಿಸಿಕೊಳ್ಳಲು ತಮ್ಮ ಆಹಾರ ಕ್ರಮಗಳಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಇವೆಲ್ಲವುಗಳ ಜೊತೆಗೆ ತಜ್ಞರು ಸೂಚಿಸುವಂತಹ ಕೆಲವು ನೈಸರ್ಗಿಕ ಸಲಹೆಗಳನ್ನು ಅನುಸರಿಸುವ ಮೂಲಕ ಹೆಚ್ಚುವರಿ ದೇಹದ ತೂಕವನ್ನು ಸರಳ ಮತ್ತು ತ್ವರಿತವಾಗಿ ಕಡಿಮೆ ಮಾಡಬಹುದು. ಈ ಟಿಪ್ಸ್ ಅನುಸರಿಸಲು ಹೆಚ್ಚುವರಿ ಸಮಯ ಮೀಸಲಿಡುವ ಅಗತ್ಯವಿಲ್ಲ. ನಿಮ್ಮ ದೈನಂದಿನ ದಿನಚರಿಯಲ್ಲಿ ಭಾಗವಾಗಿ ಇವುಗಳನ್ನು ಅನುಸರಿಸಬಹುದು. ಇದರಿಂದ ದೇಹದಲ್ಲಿನ ಕೊಬ್ಬು ವೇಗವಾಗಿ ಕರಗುತ್ತದೆ. ತೂಕ ಇಳಿಸುವ ಗುರಿಯನ್ನು ಪರಿಣಾಮಕಾರಿಯಾಗಿ ಸಾಧಿಸಲಾಗುತ್ತದೆ.
ಪ್ರತಿಯೊಂದಕ್ಕೂ ವಾಹನದ ಮೇಲೆ ಅವಲಂಬಿತರಾಗಬೇಡಿ: ಅನೇಕರು ತಮ್ಮ ಮನೆಗಳ ಹತ್ತಿರದ ಅಂಗಡಿಗಳಿಗೆ ಬೈಕ್​ ಇಲ್ಲವೇ ಕಾರಿನಲ್ಲಿ ಹೋಗುತ್ತಾರೆ. ತುರ್ತು ಕಾರ್ಯವಿಲ್ಲದಿದ್ದರೆ ಹಾಗೆ ಮಾಡಬೇಡಿ. ಯಾವುದಾದರೂ ಅಂಗಡಿಗಳಿಗೆ ತೆರಳಬೇಕಾದರೆ ನಡೆದುಕೊಂಡೇ ಹೋಗುವುದು ಉತ್ತಮ. ಇಲ್ಲವೇ ಸೈಕಲ್ ಬಳಸಿ ಸಂಚಾರ ಮಾಡಬಹುದು. ದೈಹಿಕ ಕೆಲಸ ಮಾಡುತ್ತಿದ್ದೇವೆ ಎಂದು ನಿಮಗೆ ಭಾಸವಾಗುತ್ತದೆ. ದೇಹದ ತೂಕ ಇಳಿಸುವ ಗುರಿಯನ್ನು ಆದಷ್ಟು ಬೇಗ ಸಾಧಿಸಲಾಗುತ್ತದೆ.
ವಾರದಲ್ಲಿ ಕನಿಷ್ಠ ಒಂದು ದಿನವಾದರೂ ಮನೆಗೆಲಸ ಮಾಡಬೇಕಾಗುತ್ತದೆ. ಮನೆ ಸ್ವಚ್ಛಗೊಳಿಸುವುದು, ತೋಟಗಾರಿಕೆ, ಧೂಳು ತೆಗೆಯುವುದು ಹಾಗೂ ಒರೆಸುವುದು ಮುಂತಾದ ಕೆಲಸಗಳನ್ನು ಮಾಡಿ. ಇದರಿಂದ ಸ್ವಲ್ಪ ದೈಹಿಕ ಕೆಲಸ ಮಾಡಿದಂತೆ ಭಾಸವಾಗುತ್ತದೆ. ಈ ಅಭ್ಯಾಸ ಮಾಡಿಕೊಂಡರೆ ದೇಹವು ಸಾಕಷ್ಟು ವ್ಯಾಯಾಮ ಪಡೆಯುತ್ತದೆ. ಇದರ ಪರಿಣಾಮವಾಗಿ ದೇಹದ ತೂಕ ಇಳಿಸಿಕೊಳ್ಳಲು ತುಂಬಾ ಸರಳವಾಗುತ್ತದೆ. ಅನೇಕರು ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡುತ್ತಾರೆ. ಅಂತಹವರು ಫೋನ್ ಕರೆ ಬಂದಾಗ, ಹೊರಗೆ ನಡೆದುಕೊಂಡು ಮಾತನಾಡುತ್ತಾರೆ. ಇದೂ ಕೂಡ ದೈಹಿಕ ಕೆಲಸ ಮಾಡಿದಂತೆ ಭಾಸವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!