ಉದಯವಾಹಿನಿ, ಆನೇಕಲ್: ಮಹಿಳೆ ಮತ್ತು ಯುವತಿಯ ಸಲಿಂಗ ಕಾಮದ ದಾಹಕ್ಕೆ ಐದು ತಿಂಗಳ ಕಂದಮ್ಮ ಬಲಿಯಾಗಿರುವ ಘಟನೆ ರಾಜ್ಯದ ಗಡಿಭಾಗ ತಮಿಳುನಾಡಿನ ಕೆಳಮಂಗಲಂ ಸಮೀಪದ ಚಿನ್ನಟ್ಟಿಯಲ್ಲಿ ನಡೆದಿದೆ. ಭಾರತಿ (26) ಎಂಬ ವಿವಾಹಿತೆಯ ಜೊತೆ ಸುಮಿತ್ರಾ (22) ಎಂಬ ಯುವತಿ ಸಲಿಂಗ ಕಾಮ ನಡೆಸುತ್ತಿದ್ದಳು. ಸುರೇಶ್ ಮತ್ತು ಭಾರತಿಗೆ ಮದುವೆಯಾಗಿ ಐದು ವರ್ಷವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಒಂದು ಗಂಡು ಮಗುವಿತ್ತು. ಅದೇ ಏರಿಯಾದ ಯುವತಿ ಸುಮಿತ್ರಾ ಎಂಬಾಕೆಯ ಜೊತೆಗೆ ಭಾರತಿ ಸ್ನೇಹ ಬೆಳೆಸಿಕೊಂಡಿದ್ದಳು. ಸ್ನೇಹ ಸಲಿಂಗ ಕಾಮಕ್ಕೆ ತಿರುಗಿ, ಪತಿ ಇಲ್ಲದೆ ಇದ್ದಾಗ ಮನೆಯಲ್ಲಿ ಸೇರಿಕೊಳ್ಳುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಭಾರತಿ-ಸುಮಿತ್ರಾ ಸಲಿಂಗ ಕಾಮಿಗಳಾಗಿದ್ದರು. ಇಬ್ಬರು ಮಾತನಾಡಿಕೊಳ್ಳೋಕೆ ಬೇರೆ ಮೊಬೈಲ್ ಕೂಡ ಇಟ್ಟುಕೊಂಡಿದ್ದರು. ಸ್ನಾನ ಮಾಡುವಾಗ ನಗ್ನವಾಗಿ ವೀಡಿಯೋ ಕಾಲ್ ಮಾಡೋದು, ಇಬ್ಬರು ಕಿಸ್ ಮಾಡುತ್ತ ಪೋಟೋ ಕೂಡ ಕ್ಲಿಕ್ಲಿಸಿಕೊಂಡಿದ್ದರು. ಭಾರತಿ ಎದೆ ಮೇಲೆ ‘ಸುಮಿ’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಳು. ಅಲ್ಲದೇ ಇಬ್ಬರೂ ಫೋಟೋಗಳನ್ನ ಹಾಕಿ ರೀಲ್ಸ್ ವಿಡಿಯೋ ಕೂಡ ಮಾಡಿದ್ದರು.
