ಉದಯವಾಹಿನಿ, ದಾವಣಗೆರೆ: ಅಕ್ರಮವಾಗಿ ಪಡಿತರ ರಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ದಾವಣಗೆರೆ ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಇರ್ಷಾದ್ ಅಲಿ ಎಂದು ಗುರುತಿಸಲಾಗಿದೆ. ನಗರದ ಪಿಜೆ ಬಡಾವಣೆಯ ಮೋತಿ ವೀರಪ್ಪ ಕಾಲೇಜು ಬಳಿ ಗೂಡ್ಸ್ ವಾಹನದಲ್ಲಿ ಆರೋಪಿ ಅಕ್ರಮವಾಗಿ ಪಡಿತರ ರಾಗಿ ಸಾಗಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ವಾಹನದಲ್ಲಿದ್ದ ರಾಗಿ ಮೂಟೆಗಳ ಬಿಲ್ ಕೊಡುವಂತೆ ಆರೋಪಿ ಬಳಿ ಕೇಳಿದ್ದಾರೆ. ಆಗ ಆತ ಮಲೇಬೆನ್ನೂರು ಗ್ರಾಮದ ಸುತ್ತಮುತ್ತ ಗ್ರಾಮಗಳಲ್ಲಿ ಜನಗಳಿಂದ ಕಡಿಮೆ ಬೆಲೆಗೆ ಪಡಿತರ ರಾಗಿಯನ್ನು ಖರೀದಿಸಿ ಎಪಿಎಂಸಿಯಲ್ಲಿ ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದಾನೆ. ಅಕ್ರಮವಾಗಿ ಪಡಿತರ ರಾಗಿಯನ್ನು ಮಾರಾಟ ಮಾಡಲು ಸಾಗಿಸುತ್ತಿರುವುದು ಖಚಿತವಾದ ಹಿನ್ನೆಲೆಯಲ್ಲಿ ಆರೋಪಿ ಇರ್ಷಾದ್ ಅಲಿಯನ್ನು ಬಂಧಿಸಿದ್ದಾರೆ.
