ಉದಯವಾಹಿನಿ, ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಅಂತಿಮ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದು, 2-1 ಅಂತರದಲ್ಲಿ ಟೀಂ ಇಂಡಿಯಾ ಸರಣಿ ಗೆದ್ದಿದೆ. ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡಿತು. ಮಳೆ ಕಾರಣದಿಂದಾಗಿ ಪಂದ್ಯ ತಡವಾಗಿ ಆರಂಭವಾಯಿತು. ಬ್ಯಾಟಿಂಗ್‌ ಆರಂಭಿಸಿದ ಭಾರತ 4.5 ಓವರ್‌ಗೆ 52 ರನ್‌ ಗಳಿಸಿತ್ತು. ಓಪನರ್‌ಗಳಾದ ಅಭಿಷೇಕ್‌ ಶರ್ಮಾ 23, ಶುಭಮನ್‌ ಗಿಲ್‌ 29 (ಔಟಾಗದೇ) ರನ್‌ ಗಳಿಸಿದ್ದರು. ಮತ್ತೆ ಮಳೆ ಸುರಿದು ಪಂದ್ಯಕ್ಕೆ ಅಡ್ಡಿಪಡಿಸಿತು.‌
ಮಳೆ ನಿಲ್ಲುವ ಯಾವ ಲಕ್ಷಣವೂ ಕಾಣಲಿಲ್ಲ. ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. 2-1 ಅಂತರದಲ್ಲಿ ಸೂರ್ಯಕುಮಾರ್‌ ನೇತೃತ್ವದ ಟೀಂ ಇಂಡಿಯಾ ಸರಣಿ ತನ್ನದಾಗಿಸಿಕೊಂಡಿತು. ಆಡಮ್ ಗಿಲ್‌ಕ್ರಿಸ್ಟ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಕೊಟ್ಟರು. ಐದು ಪಂದ್ಯಗಳ ಸರಣಿಯಲ್ಲಿ 163 ರನ್ ಗಳಿಸಿದ ಅಭಿಷೇಕ್ ಶರ್ಮಾ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತು.
ಐದು ಪಂದ್ಯಗಳ ಸರಣಿಯಲ್ಲಿ ಮಳೆ ಕಾರಣದಿಂದಲೇ ಮೊದಲ ಪಂದ್ಯ ರದ್ದಾಗಿತ್ತು. ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದಿತ್ತು. ಮೂರು ಮತ್ತು ನಾಲ್ಕನೇ ಪಂದ್ಯವನ್ನು ಭಾರತ ತಂಡ ತನ್ನದಾಗಿಸಿಕೊಂಡಿತ್ತು.

Leave a Reply

Your email address will not be published. Required fields are marked *

error: Content is protected !!