ಉದಯವಾಹಿನಿ, ನವದೆಹಲಿ: ವಿಶ್ವಕಪ್ ಫೈನಲ್ ಪಂದ್ಯವಾಡದ ಪ್ರತೀಕಾ ರಾವಲ್ ಅವರಿಗೆ ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಜಯ್‌ಶಾ ಅವರಿಂದ ಚಿನ್ನದ ಪದಕ ಲಭಿಸಿದೆ.ಗಾಯಗೊಂಡು ಟೀಂ ಇಂಡಿಯಾದ ಭಾಗವಾಗಿರದ ಕಾರಣ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಅವರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಚಿನ್ನದ ಪದಕ ಸಿಕ್ಕಿರಲಿಲ್ಲ. ಆದರೆ ಐಸಿಸಿ ಈಗ ಪ್ರತೀಕಾ ರಾವಲ್ ಗಾಯಗೊಂಡಿದ್ದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಚಿನ್ನದ ಪದಕ ನೀಡಿದೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಪ್ರತೀಕಾ ರಾವಲ್ ಪಂದ್ಯ ಮುಗಿದ ನಂತರ ನಮ್ಮ ತಂಡದ ಮ್ಯಾನೇಜರ್ ಅವರಿಗೆ ಜಯ್ ಶಾ ಸರ್ ಮೆಸೇಜ್ ಮಾಡಿ ಪದಕ ನೀಡುವುದಾಗಿ ತಿಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವು ಭೇಟಿಯಾಗುವ ಮೊದಲು ನನಗೆ ಪದಕ ಸಿಕ್ಕಿತ್ತು. ಅದನ್ನು ನಾನು ಧರಿಸಿದ್ದೆ ಎಂದು ತಿಳಿಸಿದರು.
