ಉದಯವಾಹಿನಿ, ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್‌ ಸರಣಿಯ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಆದರೆ, ಇದೀಗ ಮೊದಲನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ವಿಕೆಟ್‌ ಕೀಪರ್‌ ಸ್ಥಾನಕ್ಕೆ ರಿಷಭ್‌ ಪಂತ್‌ ) ಅಥವಾ ಧ್ರುವ್‌ ಜುರೆಲ್‌ ( ಅವರಲ್ಲಿ ಯಾರನ್ನೂ ಆಯ್ಕೆ ಮಾಡಬೇಕೆಂದು ಗೌತಮ್‌ ಗಂಭೀರ್‌ ಮಾರ್ಗದರ್ಶನದ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ತಲೆ ನೋವು ಶುರುವಾಗಿದೆ. ಸಹಜವಾಗಿ ರಿಷಭ್‌ ಪಂತ್‌ ಟೆಸ್ಟ್‌ ತಂಡದಲ್ಲಿ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿದ್ದಾರೆ. ಆದರೆ, ಇದೀಗ ದಕ್ಷಿಣ ಆಫ್ರಿಕಾ ಎ ವಿರುದ್ದದ ಎರಡನೇ ಅನಿಧಿಕೃತ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಜುರೆಲ್‌ ಶತಕಗಳನ್ನು ಭಾರಿಸಿರುವುದರಿಂದ ಭಾರತದ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ತಲೆ ನೋವು ಶುರುವಾಗಿದೆ.
ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಧ್ರುವ್‌ ಜುರೆಲ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಆ ಮೂಲಕ ಎರಡೂ ಇನಿಂಗ್ಸ್‌ಗಳಲ್ಲಿ ಶತಕಗಳನ್ನು ಬಾರಿಸಿದ್ದಾರೆ. ಆ ಮೂಲಕ ಆಫ್ರಿಕಾ ಟೆಸ್ಟ್‌ ಸರಣಿಗೂ ಮುನ್ನ ಶಕ್ತಿಯುತ ಫಾರ್ಮ್‌ಗೆ ಮರಳಿದ್ದಾರೆ. ಮತ್ತೊಂದು ಕಡೆ ಗಾಯದಿಂದ ಗುಣಮುಖತರಾಗಿ ಬಂದಿರುವ ರಿಷಭ್‌ ಪಂತ್‌, ಭಾರತ ಎ ಪರ ಮೊದಲನೇ ಅನಧಿಕೃತ ಟೆಸ್ಟ್‌ನಲ್ಲಿ ಅರ್ಧಶತಕವನ್ನು ಬಾರಿಸಿದ್ದರು. ಆದರೆ, ಇದೀಗ ಜುರೆಲ್‌, ಪಂತ್‌ಗೆ ವಿಕೆಟ್‌ ಕೀಪರ್‌ ಸ್ಥಾನಕ್ಕೆ ಬಲಿಷ್ಠವಾದ ಪೈಪೋಟಿಯನು ನೀಡುತ್ತಿದ್ದಾರೆ.
ಭರ್ಜರಿ ಫಾರ್ಮ್‌ನಲ್ಲಿ ಧ್ರುವ್‌ ಜುರೆಲ್‌: 24ರ ಪ್ರಾಯದ ಧ್ರುವ್‌ ಜುರೆಲ್‌ ಅವರು ಈ ಹಿಂದೆ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದರು. ಅವರು ವಿಂಡೀಸ್ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕ್ರಮವಾಗಿ 125 ರನ್‌, 44 ರನ್‌ ಹಾಗೂ ಅಜೇಯ 6 ರನ್‌ ಗಳಿಸಿದ್ದರು. ಅದೇ ಲಯವನ್ನು ಅವರು ಇದೀಗ ಅನಧಿಕೃತ ಟೆಸ್ಟ್‌ ಸರಣಿಯಲ್ಲಿಯೂ ಮುಂದುವರಿಸಿದ್ದಾರೆ. ದಕ್ಷಿಣ ಆಫ್ರಿಕಾ ಎ ವಿರುದ್ಧ ಪ್ರಥಮ ಇನಿಂಗ್ಸ್‌ನಲ್ಲಿ ಧ್ರುವ್‌ ಜುರೆಲ್‌ 175 ಎಸೆತಗಳಲ್ಲಿ ಅಜೇಯ 132 ರನ್‌ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಅವರಯ 12 ಬೌಂಡರಿಗಳು ಹಾಗೂ 4 ಸಿಕ್ಸರ್‌ಗಳನ್ನು ಬಾರಿಸಿದ್ದರು. ಆ ಮೂಲಕ ಭಾರತ ಎ ತಂಡ 77.1 ಓವರ್‌ಗಳಿಗೆ 255 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು. ಇದಾದ ಬಳಿಕ ದ್ವಿತೀಯ ಇನಿಂಗ್ಸ್‌ ಅವರು 159 ಎಸೆತಗಳಲ್ಲಿ ಶತಕವನ್ನು ಗಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!