ಉದಯವಾಹಿನಿ,  ಚಳಿಗಾಲ ಬಂತೆಂದರೆ ಅದರ ಹಿಂದೆಯೇ ಹಲವಾರು ರೋಗ ರುಜಿನಗಳು ಬರುತ್ತವೆ. ಧೋ ಎಂದು ಸುರಿದ ಮಳೆಯಿಂದ ಸುಧಾರಿಸಿಕೊಳ್ಳುವ ಅನ್ನುವಷ್ಟರೊಳಗೆ ಈ ಚಳಿ ಪ್ರಾರಂಭವಾಗಿ ಸೋಂಕುಗಳ ಕಾಟದ ಜೊತೆ, ಈ ಶೀತ ಕೆಮ್ಮುವಿನ ಭಯವೂ ಆರಂಭವಾಗುತ್ತದೆ. ಇಂತಹ ಸಮಯದಲ್ಲಿ ಆರೋಗ್ಯದನಿಗಾ ಇಡುವುದರ ಜೊತೆ ನಾವು ಸೇವಿಸುವ ಆಹಾರ ಪದಾರ್ಥಗಳ ಮೇಲೆಯೂ ಜಾಗರೂಕತೆ ವಹಿಸಬೇಕಾಗುತ್ತದೆ.
ಅದರಲ್ಲೂ ಚಳಿಗಾಲದಲ್ಲಿ ವಿಟಮಿನ್‌(Vitamin) ಅಂಶ ಇರುವ ಹಣ್ಣುಗಳನ್ನು ಸೇವಿಸುವುದು ಅತ್ಯವಶ್ಯವಾಗಿದ್ದು, ದೇಹಕ್ಕೆ ಈ ಕಾಲದಲ್ಲಿ ಹೆಚ್ಚುವರಿ ವಿಟಮಿನ್‌ ಜೊತೆ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ.
ಹಾಗಾಗಿ ಚಳಿಗಾಲದಲ್ಲಿ ಯಥೇಚ್ಛವಾಗಿ ಸಿಗುವ ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಲಿದ್ದು, ಅಂತಹ ಹಣ್ಣುಗಳ ಪೈಕಿ ಸೀತಾಫಲಕೂಡ ಒಂದಾಗಿದೆ.. ಹಾಗಿದ್ರೆ ಚಳಿಗಾಲದಲ್ಲಿ ನಮ್ಮ ಮನೆಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿರುವ ಸೀತಾಫಲ ಸೇವಿಸುವುದರಿಂದ ಆಗುವ ಪ್ರಯೋಜನ ಎಂಬುದರ ಬಗ್ಗೆ
ಮಾಹಿತಿ ಇಲ್ಲಿದೆ.. ಜೀರ್ಣಕ್ರಿಯೆ ಸರಿಯಾಗುತ್ತದೆ
ಸೀತಾಫಲದಲ್ಲಿ ನಾರಿನ ಪ್ರಮಾಣವು ಹೇರಳವಾಗಿದೆ, ಇದರಿಂದಾಗಿ ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಚಳಿಗಾಲದಲ್ಲಿ ಸೀತಾಫಲವನ್ನು ತಪ್ಪದೇ ಸೇವಿಸಿ. ಈ ಹಣ್ಣನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಸೀತಾಫಲದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇವು ಬಹು ಸೋಂಕುಗಳು ಮತ್ತು ರೋಗಗಳನ್ನು ತಡೆಯುತ್ತವೆ. ಇದಲ್ಲದೆ, ಅದರ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಯಾವುದೇ ಸೋಂಕಿಗೆ ಚಿಕಿತ್ಸೆ ನೀಡುವಾಗ ದೇಹದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.ತ್ವಚೆಯ ಆರೋಗ್ಯಕ್ಕೆ ಸಹಕಾರಿ: ಸೀತಾಫಲದಲ್ಲಿರುವ ಹಲವಾರು ಆ್ಯಂಟಿಆಕ್ಸಿಡೆಂಟ್‌ಗಳು ನಯವಾದ ತ್ವಚೆಯನ್ನು ಪಡೆಯಲು ತುಂಬಾ ಸಹಕಾರಿಯಾಗಿದ್ದು, ಹಾನಿಕಾರಕ ಸ್ವತಂತ್ರ ರಾಡಿಕಲ್ಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಜೊತೆಗೆ ತ್ವಚೆಯ ಕೋಮಲತೆಯನ್ನು ಹೆಚ್ಚಿಸಲಿದ್ದು, ಇದು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಇದು ಚರ್ಮವನ್ನು ಮೊಡವೆಗಳಿಂದ ರಕ್ಷಿಸುತ್ತದೆ.

Leave a Reply

Your email address will not be published. Required fields are marked *

error: Content is protected !!