ಉದಯವಾಹಿನಿ: ಎ, ಸಿ ವಿಟಮಿನ್‌ಗಳು ಹೇರಳವಾಗಿರುವ ಪಪ್ಪಾಯ ಹಣ್ಣಿನ ಸೇವನೆ ಆರೋಗ್ಯಕ್ಕೆ ಒಳಿತು. ಹಾಗಾದರೆ ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ.
ಪಪ್ಪಾಯ ಹಣ್ಣು ಸೇವನೆಯಿಂದಾಗುವ ಪ್ರಯೋಜನಗಳು: ಪಪ್ಪಾಯ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಕಣ್ಣಿನ ಆರೋಗ್ಯ ಸಮಸ್ಯೆ ಸುಧಾರಿಸುತ್ತದೆ. ಈ ಹಣ್ಣಿನ ಒಳ ಭಾಗವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಮೊಡವೆಗಳು ಶಮನಗೊಂಡು ಮುಖ ಹೊಳೆಯುವಂತೆ ಮಾಡುತ್ತದೆ. ಕೂದಲು ಉದುರುವಿಕೆ, ತಲೆ ಹೊಟ್ಟಿನ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.ಈ ಹಣ್ಣಿನ ಸೇವನೆಯು ಜೀರ್ಣಕ್ರಿಯೆಗೆ, ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ, ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡಲು ಸಹಕರಿಸುತ್ತದೆ.
ಪಪ್ಪಾಯ ಸೇವನೆಯಿಂದ ದೇಹದಲ್ಲಿ ಪ್ಲೇಟೈಟ್‌ಗಳ ಕೊರತೆಯಿಂದ ಬರುವ ಡೆಂಗಿ ಮತ್ತು ಮಲೇರಿಯಾಗಳನ್ನು ನಿಯಂತ್ರಿಸುತ್ತದೆ. ರಕ್ತದ ಹೆಚ್ಚಳಕ್ಕೆ ಇದು ಉಪಕಾರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.ಗರ್ಭಿಣಿಯರು, ಮಧುಮೇಹ, ಅತಿಸಾರ ಸಮಸ್ಯೆ ಇರುವವರು ಪಪ್ಪಾಯ ಹಣ್ಣನ್ನು ಸೇವಿಸಬಾರದು.

Leave a Reply

Your email address will not be published. Required fields are marked *

error: Content is protected !!