ಉದಯವಾಹಿನಿ, ಸಾಮಾನ್ಯವಾಗಿ ಊಟದಲ್ಲಿ ಅನೇಕ ರೀತಿಯ ರೈಸ್ನ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇದರಲ್ಲಿ ಚಿತ್ರಾನ್ನ, ಮೊಸರನ್ನ, ಪುಳಿಯೋಗರೆ, ಪಾಲಕ್ ಹಾಗೂ ಪುದೀನಾ ರೈಸ್ ಹೀಗೆ ವಿವಿಧ ರೈಸ್ ರೆಸಿಪಿಗಳು ಸೇರಿವೆ. ಈ ಬಾರಿ ಇವುಗಳ ಬದಲು ಕರಿಬೇವು ಬಳಸಿ ರೈಸ್ ಮಾಡಿದರೆ ಸೂಪರ್ ರುಚಿಯಾಗಿರುತ್ತದೆ. ಈ ರೈಸ್ ರೆಸಿಪಿಯನ್ನು ಕಡಿಮೆ ಅವಧಿಯಲ್ಲಿ ತಯಾರಿಸಬಹುದು. ಶೇಂಗಾ ಹಾಗೂ ಗೋಡಂಬಿ ಹಾಕಿದರೆ ಈ ರೈಸ್ ಸೇವಿಸಿದರೆ ರುಚಿ ಅದ್ಭುತವಾಗಿರುತ್ತದೆ. ಮನೆಯಲ್ಲಿ ರೆಸಿಪಿಯನ್ನು ತಯಾರಿಸಿದರೆ ಎಲ್ಲರಿಗೂ ಇಷ್ಟವಾಗುತ್ತದೆ. ಇದೀಗ ಬಾಯಲ್ಲಿ ನೀರೂರಿಸುವ ಈ ರೈಸ್ ರೆಸಿಪಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ. ಕರಿಬೇವಿನ ರೈಸ್ಗಾಗಿ ಬೇಕಾಗುವ ಸಾಮಗ್ರಿಗಳೇನು?
ಅಕ್ಕಿ – 1 ಕಪ್ ಎಣ್ಣೆ – 2 ಟೀಸ್ಪೂನ್ ಶೇಂಗಾ – 2 ಟೀಸ್ಪೂನ್ ಗೋಡಂಬಿ – 2 ಟೀಸ್ಪೂನ್ ಪುಟಾಣಿ – 3/4 ಕಪ್
ತೆಂಗಿನಕಾಯಿ ತುರಿ – 1 ಟೀಸ್ಪೂನ್ ಕೆಂಪು ಮೆಣಸಿನಕಾಯಿ – 6 ಕರಿಬೇವು – 1 ಕಪ್ ಜೀರಿಗೆ – 1 ಟೀಸ್ಪೂನ್ ಬೆಳ್ಳುಳ್ಳಿ – 6 ಎಸಳು
ಉಪ್ಪು – ರುಚಿಗೆ ತಕ್ಕಷ್ಟು ಕೊತ್ತಂಬರಿ ಸೊಪ್ಪು – ಸ್ವಲ್ಪ
ಪ್ರತಿಯೊಬ್ಬರೂ ಇಷ್ಟಪಡುವಂತಹ ಕರಿಬೇವಿನ ರೈಸ್ ಅನ್ನು ತಯಾರಿಸಲು ಮೊದಲಿಗೆ ಒಂದು ಕಪ್ ಕರಿಬೇವಿನ ಎಲೆಗಳನ್ನು ತೊಳೆದು ಒಣಗಿಸಿಕೊಳ್ಳಿ.
ಮತ್ತೊಂದು ಕಡೆ ಒಲೆ ಆನ್ ಮಾಡಿ ಕುಕ್ಕರ್ಗೆ ಒಂದು ಕಪ್ ಅಕ್ಕಿಗೆ ಎರಡು ಕಪ್ ನೀರು ಹಾಕಿ ಅನ್ನವನ್ನು ಬೇಯಿಸಬೇಕಾಗುತ್ತದೆ.
ಇನ್ನೊಂದೆಡೆ, ಒಲೆ ಆನ್ ಮಾಡಿ ಹಾಗೂ ಬಾಣಲೆಯಲ್ಲಿ ಎರಡು ಟೀಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಎರಡು ಟೀಸ್ಪೂನ್ ಶೇಂಗಾ ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ. ಹಾಗೆ ಎರಡು ಟೀಸ್ಪೂನ್ ಗೋಡಂಬಿ ಸೇರಿಸಿ ಹುರಿಯಿರಿ. ಬಳಿಕ ಇವುಗಳನ್ನು ಒಂದು ತಟ್ಟೆಯಲ್ಲಿ ಹಾಕಿಕೊಳ್ಳಿ.
