ಉದಯವಾಹಿನಿ, ಮಸಾಲೆ ಪದಾರ್ಥ ಲವಂಗವನ್ನು ವಿವಿಧ ಭಕ್ಷ್ಯಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಲವಂಗದಲ್ಲಿ ಆ್ಯಂಟಿಮೈಕ್ರೊಬಿಯಲ್ ಹಾಗೂ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಜೊತೆಗೆ ಯುಜೆನಾಲ್ ಸಂಯುಕ್ತದಿಂದಾಗಿ ನೋವು, ಉರಿಯೂತ ಕಡಿಮೆಯಾಗುತ್ತದೆ.
ಲವಂಗವನ್ನು ನಿತ್ಯ ಸೇವಿಸುವುದರಿಂದ ಕಿಣ್ವಗಳು ಉತ್ತೇಜಿಸಲ್ಪಡುತ್ತವೆ. ಆಹಾರವು ತ್ವರಿತವಾಗಿ ಜೀರ್ಣವಾಗುತ್ತದೆ. ಇದರ ಗುಣಲಕ್ಷಣಗಳು ಬಾಯಿಯ ನೈರ್ಮಲ್ಯ ಕಾಪಾಡಿಕೊಳ್ಳುತ್ತವೆ. ಈ ಲವಂಗ ಮೂಳೆ, ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತವೆ. ಚರ್ಮ ಹಾಗೂ ಕೂದಲನ್ನು ಸಹ ಆರೋಗ್ಯಕರವಾಗಿಸುತ್ತವೆ. ಅವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಹಾಗೂ ಖನಿಜಗಳು ದೇಹವನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸುತ್ತವೆ ಹಾಗೂ ಚರ್ಮ ಯೌವನದಿಂದ ಇರುವಂತೆ ಮಾಡುತ್ತವೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ದೇಹದ ತೂಕ ಇಳಿಕೆ: ಲವಂಗದ ನೀರು ದೇಹದ ತೂಕವನ್ನು ಕಳೆದುಕೊಳ್ಳುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಲವಂಗದ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಕರಗಿಸುತ್ತದೆ. ಲವಂಗ ನೀರು ಬೊಜ್ಜು, ಹೊಟ್ಟೆಯ ಕೊಬ್ಬಿನಂತಹ ಸಮಸ್ಯೆಗಳನ್ನು ನೈಸರ್ಗಿಕವಾಗಿ ಕಡಿಮೆ ಮಾಡುವಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಲವಂಗದ ನೀರನ್ನು ಕುಡಿಯುವುದರಿಂದ ಜೀರ್ಣಕಾರಿ ಕಿಣ್ವಗಳು ಉತ್ತೇಜನಗೊಳ್ಳುತ್ತವೆ. ಉಬ್ಬುವುದು, ಅನಿಲ ಹಾಗೂ ಅಜೀರ್ಣದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಬಾಯಿಯ ಆರೋಗ್ಯ ಉತ್ತಮ: ಕೆಲವು ಜನರಿಗೆ ಬಾಯಿಯ ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ಹಲ್ಲುನೋವು ಮತ್ತು ಒಸಡು ಸಮಸ್ಯೆಗಳು ಬರುತ್ತವೆ. ಪೇಸ್ಟ್ ಮತ್ತು ಮೌತ್‌ವಾಶ್‌ಗಳನ್ನು ಬಳಸುವ ಬದಲು ಲವಂಗದ ನೀರನ್ನು ಕುಡಿಯುವುದು, ಆ ನೀರಿನಿಂದ ಬಾಯಿಯನ್ನು ಸ್ವಚ್ಛಗೊಳಿಸುವುದು ಹಾಗೂ ಬಾಯಿ ಮುಕ್ಕಳಿಸುವುದರಿಂದ ದಂತ ಸಮಸ್ಯೆಗಳು ಹಾಗೂ ಒಸಡು ಸಮಸ್ಯೆಗಳು ಕಡಿಮೆಯಾಗುತ್ತವೆ. ದುರ್ವಾಸನೆ ಕಡಿಮೆಯಾಗುತ್ತದೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಕಡಿಮೆಯಾಗುತ್ತವೆ, ಜೊತೆಗೆ ಬಾಯಿಯ ಎಲ್ಲ ಸಮಸ್ಯೆಗಳು ದೂರವಾಗುತ್ತವೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!