ಉದಯವಾಹಿನಿ, ಮುಂಬೈ: ವಿವಾಹ ಸಮಾರಂಭವೊಂದರಲ್ಲಿ ದುಷ್ಕರ್ಮಿಗಳು ವರನಿಗೆ ವೇದಿಕೆಯಲ್ಲೇ ಇರಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದೆ. ಸಮಾರಂಭವನ್ನು ಚಿತ್ರೀಕರಿಸಲು ನಿಯೋಜಿಸಲಾದ ಡ್ರೋನ್ ದಾಳಿಯನ್ನು ಸೆರೆ ಹಿಡಿದಿದಲ್ಲದೆ, ಪರಾರಿಯಾಗುತ್ತಿದ್ದ ಆರೋಪಿ ಮತ್ತು ಆತನ ಸಹಚರನನ್ನು ಸುಮಾರು ಎರಡು ಕಿಲೋಮೀಟರ್‌ಗಳವರೆಗೆ ಹಿಂಬಾಲಿಸಿದೆ ಈ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಬದ್ನೇರಾ ರಸ್ತೆಯ ಸಾಹಿಲ್ ಲಾನ್‌ನಲ್ಲಿ ರಾತ್ರಿ 9:30ರ ಸುಮಾರಿಗೆ 22 ವರ್ಷದ ಸುಜಲ್ ರಾಮ್ ಸಮುದ್ರ ಅವರ ವಿವಾಹ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ರಾಘೋ ಜಿತೇಂದ್ರ ಬಕ್ಷಿ ಎಂದು ಗುರುತಿಸಲಾದ ಆರೋಪಿಯು ವೇದಿಕೆಯಲ್ಲಿ ವರನ ಬಳಿಗೆ ಬಂದು ಚಾಕುವಿನಿಂದ ಮೂರು ಬಾರಿ ತೊಡೆ ಮತ್ತು ಮೊಣಕಾಲಿಗೆ ಇರಿದು ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಮದುವೆಯ ಸಂಭ್ರಮದ ಕ್ಷಣವನ್ನು ರೆಕಾರ್ಡ್ ಮಾಡಲು ಡ್ರೋನ್ ಕ್ಯಾಮರವನ್ನು ಬಳಸಲಾಗಿತ್ತು. ಮದುವೆ ಕಾರ್ಯಕ್ರಮವು ಅಪರಾಧ ಸ್ಥಳವಾಗಿ ಮಾರ್ಪಟ್ಟಿದ್ದರಿಂದ ಡ್ರೋನ್ ಇದಕ್ಕೆ ಸಾಕ್ಷಿಯಾಯಿತು. ಈ ಘಟನೆಯು ವಿವಾಹ ಸಂಭ್ರಮವನ್ನು ಚಿತ್ರೀಕರಿಸಲು ನಿಯೋಜಿಸಲಾದ ಡ್ರೋನ್ ಕ್ಯಾಮರದಲ್ಲಿ ಸೆರೆಯಾಗಿದೆ. ಅದು ಈಗ ಅತ್ಯಂತ ನಿರ್ಣಾಯಕ ಸಾಕ್ಷಿಗಳಲ್ಲಿ ಒಂದಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಅತಿಥಿಗಳು ಭಯಭೀತರಾಗಿದ್ದರು. ಆದರೆ ಡ್ರೋನ್ ಆಪರೇಟರ್ ದಾಳಿಕೋರನ ಚಲನೆಯನ್ನು ರೆಕಾರ್ಡ್ ಮಾಡುತ್ತಲೇ ಇದ್ದನು. ಆರೋಪಿಯು ತಪ್ಪಿಸಿಕೊಳ್ಳುವುದನ್ನು ಸಹ ಸೆರೆ ಹಿಡಿದಿದ್ದಾನೆ. ಆರೋಪಿಯ ಚಲನವಲನಗಳನ್ನು ಸುಮಾರು ಎರಡು ಕಿಲೋಮೀಟರ್‌ಗಳವರೆಗೆ ಸೆರೆಹಿಡಿಯುವಲ್ಲಿ ಯಶಸ್ವಿಯಾದನು. ನಂತರ ಯಾವ ಕಡೆ ಹೋದ ಎಂಬುದು ತಿಳಿದು ಬಂದಿಲ್ಲ.
