ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೆಬ್ಬಾಳ ಮೇಲ್ಸೆತುವೆಯ ಹೊಸ ಲೂಪ್ ರ‍್ಯಾಂಪ್ ಸಂಚಾರಕ್ಕೆ ಮುಕ್ತವಾಗಿದ್ದು, ಯಲಹಂಕ, ಸಹಕಾರನಗರ, ಜಕ್ಕೂರು, ತುಮಕೂರು ರಸ್ತೆಯ ವಾಹನಗಳು ನಗರ ಪ್ರವೇಶಿಲು ತುಂಬಾ ಅನುಕೂಲ ಆಗಿದೆ. ಹೊಸ ಲೂಪ್ ರ‍್ಯಾಂಪ್ ಓಪನ್‌ಗೆ ವಾಹನ ಸವಾರರು ಖುಷಿಯಾಗಿದ್ದಾರೆ.
ಹೌದು. ಹಲವು ವರ್ಷಗಳಿಂದ ಕಾಯುತ್ತಾ ಇದ್ದ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೆಬ್ಬಾಳ ಮೇಲ್ಸೆತುವೆಯ ಮತ್ತೊಂದು ಹೊಸ ಲೂಪ್ ರ‍್ಯಾಂಪ್ ಸಂಚಾರಕ್ಕೆ ಮುಕ್ತ ಆಗಿದೆ. ಎಸ್ಟಿಮ್ ಮಾಲ್ ಮತ್ತು ತುಮಕೂರು ರಸ್ತೆ ವಾಹನ ಸವಾರರು ಮೇಖ್ರಿ ಸರ್ಕಲ್ ಪ್ರವೇಶಕ್ಕೆ ತುಂಬಾ ಅನುಕೂಲಕರ ಮತ್ತು ಯಲಹಂಕ, ಜಕ್ಕೂರು, ಸಹಕಾರನಗರದಿಂದ ನಗರದ ಪ್ರವೇಶಕ್ಕೆ ತುಂಬಾ ಅನುಕೂಲ ಈ ಹೊಸ ಲೂಪ್ ರ‍್ಯಾಂಪ್.
ಕಳೆದ ಆಗಸ್ಟ್ ನಲ್ಲಿ ಕೆ.ಆರ್ ಪುರಂನಿಂದ ಮೇಖ್ರಿ ಸರ್ಕಲ್ ಕಡೆಗೆ ಲೂಪ್ ರ‍್ಯಾಂಪ್ ಓಪನ್ ಆಗಿತ್ತು. ಈಗ ಮತ್ತೆ ನಿನ್ನೆಯಿಂದ ಎಸ್ಟಿಮ್ ಮಾಲ್‌ನಿಂದ ಮೇಖ್ರಿ ಸರ್ಕಲ್ ಕಡೆಗೆ ಹೊಸ ಲೂಪ್ ರ‍್ಯಾಂಪ್ ಓಪನ್ ಆಗಿರೋದು ವಾಹನ ಸವಾರರಿಗೆ ಖುಷಿ ತಂದಿದೆ. ವಾಹನ ಸವಾರರು ಟ್ರಾಫಿಕ್ ಕಡಿಮೆ ಆಗಿದೆ ತುಂಬಾ ಅನುಕೂಲ ಆಗಿದೆ ಅಂತಿದ್ದಾರೆ.
