ಉದಯವಾಹಿನಿ, ಬೆಂಗಳೂರು: ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ತ್ಯಾಗರಾಜನಗರದ ಮಕ್ಕಳ ಮೇಲಿನ ಹಲ್ಲೆ ಕೇಸ್ ಈಗ ಗಂಭೀರ ಸ್ವರೂಪ ಪಡೆದುಕೊಳ್ತಿದೆ. ಮಕ್ಕಳ ಮೇಲೆ ವಿಕೃತಿ ಮೆರೆದ ಆರೋಪಿ ರಂಜನ್‌ಗೆ ನಿಜವಾಗಿಯೂ ಮಾನಸಿಕ ಸಮಸ್ಯೆ ಇದೀಯಾ ಅನ್ನೋ ಅನುಮಾನ ವ್ಯಕ್ತವಾಗಿದೆ.
ಐದು ವರ್ಷದ ಮಗುವನ್ನು ಕಾಲಿನಿಂದ ಒದ್ದ ಕೇಸ್‌ನಲ್ಲಿ ವಿಚಾರಣೆ ಎದುರಿಸಿದ್ದ ಆರೋಪಿ ರಂಜನ್ ಸದ್ಯ ತಮಿಳುನಾಡಿನ ಮದುರೈನಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಪೊಲೀಸರು, ಅವರ ಪೋಷಕರನ್ನು ಸಂಪರ್ಕ ಮಾಡಿದ ವೇಳೆ ರಂಜನ್‌ಗೆ ಮಾನಸಿಕ ಸಮಸ್ಯೆ ಇದೆ. ಅದಕ್ಕೆ ಚಿಕಿತ್ಸೆಗೆ ಅಂತಾ ಬಂದಿದ್ದೀವಿ ಎಂದು ಮಾಹಿತಿ ನೀಡಿದ್ದಾರೆ. ಆದರೆ ಚಿಕಿತ್ಸೆ ಪಡೆಯುತ್ತಿರೋ ಅಥವಾ ಈ ಹಿಂದೆ ಚಿಕಿತ್ಸೆ ಪಡೆದಿದ್ದ ಬಗ್ಗೆ ಸೂಕ್ತ ದಾಖಲೆ ನೀಡುವಂತೆ ಕೇಳಿದ್ರೂ ಪೋಷಕರು ಮಾತ್ರ ಇನ್ನೂ ಯಾವುದೇ ದಾಖಲೆ ನೀಡಿಲ್ಲ. ಆರೋಪಿ ರಂಜನ್‌ನನ್ನು ಕಳೆದ ಭಾನುವಾರ ವಶಕ್ಕೆ ಪಡೆದಿದ್ದ ಪೊಲೀಸರು ಯಾಕ್ ಹೀಗೆ ಮಾಡ್ತಿಯಾ ಅಂತಾ ಕೇಳಿದ ವೇಳೆ ನಂಗೆ ಮಕ್ಕಳನ್ನು ನೋಡಿದ್ರೆ, ಅವರ ವಾಯ್ಸ್ ಕೇಳಿ ಇರಿಟೆಡ್ ಆಗುತ್ತೆ. ಕೋಪ ಬರುತ್ತೆ, ಅದಕ್ಕೆ ಹೊಡೆದೆ ಅಂತಾ ಹೇಳಿದ್ದನಂತೆ.
ಮಕ್ಕಳ ಮೇಲಿನ ಹಲ್ಲೆ ಸಂಬಂಧ ನಾಲ್ಕು ಪೋಷಕರ ಬಳಿ ಹೇಳಿಕೆ ಪಡೆದುಕೊಂಡಿರುವ ಬನಶಂಕರಿ ಪೊಲೀಸರು, ಯಾವ್ಯಾವ ಸೆಕ್ಷನ್ ಅಡಿ ಕೇಸ್ ಹಾಕಬಹುದು, ಆರೋಪಿ ಮಾನಸಿಕ ಸಮಸ್ಯೆ ಅಂತ ಹೇಳ್ಕೋತಿರೋದರಿಂದ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ತಜ್ಞರ ಅಭಿಪ್ರಾಯ ಕೇಳಿದ್ದಾರೆ. ಇದಾದ ಬಳಿಕ ಬಂಧಿಸಿ, ನಿಮ್ಹಾನ್ಸ್ ಆಸ್ಪತ್ರೆ ವೈದ್ಯರ ಬಳಿ ಅಭಿಪ್ರಾಯ ಪಡೆದುಕೊಳ್ಳಲು ಪೊಲೀಸರು ತಿರ್ಮಾನ ಮಾಡಿದ್ದಾರೆ.
