ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಿರಿಯನ್ ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರ ಬಳಿ ನಿಮಗೆ ಎಷ್ಟು ಪತ್ನಿಯರು ಎಂದು ಕೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಹ್ಮದ್ ಅಲ್-ಶರಾ ಅವರನ್ನು ತಮ್ಮ ಅಧ್ಯಕ್ಷೀಯ ನಿವಾಸ ಶ್ವೇತಭವನದಲ್ಲಿ ಭೇಟಿಯಾದ ಟ್ರಂಪ್ ತಮ್ಮ ಕಂಪನಿ ಬಿಡುಗಡೆ ಮಾಡಿರುವ ʼವಿಕ್ಟರಿ 45–47′ ಹೆಸರಿನ ಸುಗಂಧ ದ್ರವ್ಯವನ್ನು ಉಡುಗೊರೆಯಾಗಿ ನೀಡಿದರು.
ಸುಂಗಧ ದ್ರವ್ಯವನ್ನು ಅಲ್-ಶರಾ ಮತ್ತು ಅವರ ಸಿಬ್ಬದಿ ಮೇಲೆ ಸ್ಪ್ರೇ ಮಾಡಿದ ನಂತರ ಟ್ರಂಪ್, ಇದು ನಿಮ್ಮ ಪತ್ನಿಗೆ ನೀಡುತ್ತಿದ್ದೇನೆ. ನಿಮಗೆ ಎಷ್ಟು ನಿಮಗೆ ಎಷ್ಟು ಪತ್ನಿಯರು ಎಂದು ಲಘು ದಾಟಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಅಲ್-ಶರಾ ಒಬ್ಬಳು ಎಂದು ಉತ್ತರ ನೀಡಿ ನಕ್ಕಿದ್ದಾರೆ. 1946ರಲ್ಲಿ ಸಿರಿಯಾ ಸ್ವಾತಂತ್ರ್ಯ ಪಡೆದ ನಂತರ ಸಿರಿಯಾದ ರಾಷ್ಟ್ರದ ಮುಖ್ಯಸ್ಥರೊಬ್ಬರು ಅಮೆರಿಕದ ಅಧ್ಯಕ್ಷರ ನಿವಾಸಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ. ದ್ವಿಪಕ್ಷಿಯ ಮಾತುಕತೆಯ ವೇಳೆ ಅಲ್-ಶರಾ ಇಸ್ಲಾಮಿಕ್ ಸ್ಟೇಟ್ ಗುಂಪಿನ ವಿರುದ್ಧದ ಜಾಗತಿಕ ಒಕ್ಕೂಟಕ್ಕೆ ಸೇರುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
